ಬಾಲಿವುಡ್

ಅಕ್ಟೋಬರ್ ನಲ್ಲಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ವಿವಾಹ?

Shilpa D

ನಟಿ ಪರಿಣಿತಿ ಚೋಪ್ರಾ- ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆ ಡೇಟ್‌ ಕೂಡ ಫಿಕ್ಸ್‌ ಆಗಿದೆ ಎಂದು ಹೇಳಲಾಗುತ್ತಿದೆ.

ನಟಿ ಪರಿಣಿತಿ ಚೋಪ್ರಾ ಸಿನಿಮಾಗಿಂತ ಇತ್ತೀಚಿಗೆ ರಾಜಕಾರಣಿ ರಾಘವ್ ಚಡ್ಡಾ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಚಾರವಾಗಿಯೇ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚಿಗೆ ನಟಿಯ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿತ್ತು. ಇದೀಗ ಪರಿಣಿತಿ-ರಾಘವ್ ಇಬ್ಬರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ -ನಿಕ್ ಜೋನಸ್ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಮದುವೆ ಡೇಟ್ ಕೂಡ ಫಿಕ್ಸ್ ಆಗಿದ್ದು, ಮದುವೆ ತಯಾರಿ ನಡೆಯುತ್ತಿದೆ ಎಂದು ಇಂಡಿಯಾ ಟುಡೇ ಇನ್ ಸುದ್ದಿ ವಾಹಿನಿಗೆ ಜೋಡಿಯ ಮೂಲಗಳು ತಿಳಿಸಿವೆ.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ತಮ್ಮ ಈ ಸಂಬಂಧವನ್ನು ಇನ್ನೂ ಖಚಿತಪಡಿಸಿಲ್ಲ. ಆದಾಗ್ಯೂ, ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಈ ವರ್ಷದ ಆರಂಭದಲ್ಲಿ ಮುಂಬೈನ ಉಪಾಹಾರ ಗೃಹದಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಅವರ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು, ಅದರ ನಂತರ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ಈಗ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ಪರಿಣಿತಿ ಭೇಟಿ ನೀಡಿದ್ದಾರೆ. ಮದುವೆಗೆ ಡ್ರೆಸ್ ಆರ್ಡರ್ ನೀಡಿ ಬಂದಿದ್ದಾರೆ. ಈ ವೇಳೆ ಮತ್ತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಾಗ, ರಾಘವ್ ಚಡ್ಡಾ ಬಗ್ಗೆ ಕೇಳಲಾಗಿದೆ. ಯಾವುದೇ ಪ್ರಶ್ನೆಗೂ ಉತ್ತರಿಸದೇ ನಕ್ಕು ಸುಮ್ಮನಾಗಿದ್ದಾರೆ.

ಪರಿಣಿತಿ ಚೋಪ್ರಾ ಈ ನಡೆ ಮದುವೆ ಅಂತೆ- ಕಂತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಕ್ಟೋಬರ್‌ನಲ್ಲಿ ಪರಿಣಿತಿ-ರಾಘವ್ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.

SCROLL FOR NEXT