ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ಮದುವೆ ಸುದ್ದಿ ಖಚಿತ ಪಡಿಸಿದ ಸಹ ನಟ ಹಾರ್ಡಿ ಸಂಧು!

ರಾಜಕಾರಣಿ (ಎಎಪಿ ಪಕ್ಷದ ನಾಯಕ) ರಾಘವ್ ಚಡ್ಡಾ ಜೊತೆಗೆ ಪರಿಣಿತಿ ಚೋಪ್ರಾ ಇಬ್ಬರು ಸದ್ಯ ಸುದ್ದಿಯಲ್ಲಿದ್ದಾರೆ. ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮದುವೆಯಾಗುತ್ತಿದ್ದಾರೆ  ಎಂದು ನಟ, ಗಾಯಕ ಹಾರ್ಡಿ ಸಂಧು ಖಚಿತ ಪಡಿಸಿದ್ದಾರೆ.
ಪರಿಣಿತಿ ಮತ್ತು ರಾಘವ್ ಛಡ್ಡಾ

ಕೊನೆಗೂ ಪರಿಣಿತಿ ಚೋಪ್ರಾ ಜೀವನದಲ್ಲಿ ಸೆಟಲ್ ಆಗುತ್ತಿದ್ದಾರೆ. ನನಗಂತೂ ಆಕೆಯ ನಿರ್ಧಾರದ ಬಗ್ಗೆ ಖುಷಿ ಇದೆ. ಪರಿಣಿತಿ ಚೋಪ್ರಾಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹಾರ್ಡಿ ಸಂಧು ತಿಳಿಸಿದ್ದಾರೆ. ಪರಿಣಿತಿ ಚೋಪ್ರಾ ಜೊತೆಗೆ ಮಾತನಾಡಿದ್ದೇನೆ. ಫೋನ್ ಮಾಡಿ ನನ್ನ ಶುಭಾಶಯಗಳನ್ನ ತಿಳಿಸಿದ್ದೇನೆ ಎಂದಿದ್ದಾರೆ.

ನನಗೆ ತಕ್ಕ ವರ ಸಿಕ್ಕಿದ್ದಾನೆ ಎಂದೆನಿಸಿದ ಬಳಿಕವಷ್ಟೇ ನಾನು ಮದುವೆಯಾಗುತ್ತೇನೆ ಎಂದು ಶೂಟಿಂಗ್ ವೇಳೆ ಪರಿಣಿತಿ ಚೋಪ್ರಾ ಹೇಳುತ್ತಿದ್ದರು ಅಂತ ಹಾರ್ಡಿ ಸಂಧು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ದೆಹಲಿ ಏರ್‌ಪೋರ್ಟ್‌ನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com