ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಮ್ ಚರಣ್- ಪತ್ನಿ ಉಪಾಸನಾ 
ಬಾಲಿವುಡ್

ನವವಿವಾಹಿತರಾದ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಕ್ಷಮೆಯಾಚಿಸಿದ ನಟ ರಾಮ್ ಚರಣ್ ಪತ್ನಿ ಉಪಾಸನಾ

ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ಮುಂಬೈ: ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ಪೂರ್ವ ನಿಗಧಿ ಕೆಲಸಗಳ ಕಾರಣದಿಂದ ತಮ್ಮ ಮದುವೆಗೆ ಹಾಜರಾಗದಿದ್ದಕ್ಕಾಗಿ ಉಪಾಸನಾ ಅವರು ದಂಪತಿಗೆ ಕ್ಷಮೆಯಾಚಿಸಿದ್ದಾರೆ.

ಕಮೆಂಟ್ ಮಾಡಿರುವ ಅವರು, 'ಅಭಿನಂದನೆಗಳು. ಇದು ತುಂಬಾ ಸುಂದರವಾಗಿದೆ. ಕ್ಷಮಿಸಿ ನಾವು ಅಲ್ಲಿರಲು ಸಾಧ್ಯವಾಗಲಿಲ್ಲ. ನಿಮ್ಮಿಬ್ಬರಿಗೂ ನಮ್ಮ ಕಡೆಯಿಂದ ಬಹಳಷ್ಟು ಪ್ರೀತಿ' ಎಂದಿದ್ದಾರೆ.

ಕಿಯಾರಾ ಮತ್ತು ಸಿದ್ಧಾರ್ಥ್ ಫೆಬ್ರುವರಿ 7 ರಂದು ಜೈಸಲ್ಮೇರ್‌ನ ಸೂರ್ಯಗ್ರಹ ಅರಮನೆಯಲ್ಲಿ ವಿವಾಹವಾದರು. ಮಂಗಳವಾರ ತಡರಾತ್ರಿ ನಡೆದ ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.

ಕಿಯಾರಾ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಸಿದ್ಧಾರ್ಥ್ ಅದಕ್ಕೆ ಹೊಂದುವ ಪೇಟದೊಂದಿಗೆ ಶೇರ್ವಾನಿಯನ್ನು ಧರಿಸಿದ್ದರು.

ಸಿದ್ಧಾರ್ಥ್ ಶೀಘ್ರದಲ್ಲೇ ರೋಹಿತ್ ಶೆಟ್ಟಿ ನಿರ್ದೇಶನದ ಮುಂಬರುವ 'ಇಂಡಿಯನ್ ಪೋಲೀಸ್ ಫೋರ್ಸ್‌'ನೊಂದಿಗೆ ವೆಬ್ ಸರಣಿಯನ್ನು ಪ್ರಾರಂಭಿಸಲಿದ್ದಾರೆ. ಅವರ ಮುಂಬರುವ ಯೋಜನೆಗಳಲ್ಲಿ ಯೋಧಾ ಕೂಡ ಒಂದು. ಕಿಯಾರಾ ಅವರು, ಕಾರ್ತಿಕ್ ಆರ್ಯನ್ ಜೊತೆಗೆ ಸತ್ಯಪ್ರೇಮ್ ಕಿ ಕಥಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Toxic: ಭರ್ಜರಿ ಓಪನಿಂಗ್, ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್, ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!