ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್ 
ಬಾಲಿವುಡ್

ಕೊನೆಗೂ OTTಗೆ ಬಂದ ದಿ ಕೇರಳ ಸ್ಟೋರಿ: ಅದಾ ಶರ್ಮಾ ಅಭಿನಯದ ಹಿಟ್ ಚಿತ್ರದ ಸ್ಟ್ರೀಮಿಂಗ್ ಮಾಹಿತಿ ಇಲ್ಲಿದೆ..

2023ರಲ್ಲಿ ಮಧ್ಯದಲ್ಲಿ ತೆರೆಕಂಡು ಭಾರಿ ಸುದ್ದಿ ಮತ್ತು ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಚಿತ್ರ ಕೊನೆಗೂ ಓಟಿಟಿ ರಿಲೀಸ್‌ ಗೆ ರೆಡಿಯಾಗಿದೆ.

ಮುಂಬೈ: 2023ರಲ್ಲಿ ಮಧ್ಯದಲ್ಲಿ ತೆರೆಕಂಡು ಭಾರಿ ಸುದ್ದಿ ಮತ್ತು ಸಂಚಲನ ಮೂಡಿಸಿದ್ದ ದಿ ಕೇರಳ ಸ್ಟೋರಿ ಚಿತ್ರ ಕೊನೆಗೂ ಓಟಿಟಿ ರಿಲೀಸ್‌ ಗೆ ರೆಡಿಯಾಗಿದೆ.

ಹೌದು.. ನಟಿ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ 2023ರಲ್ಲಿ ಬಾಲಿವುಡ್‌ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಮತಾಂತರ ಕುರಿತ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಬಿಡುಗಡೆಯಾಗಿ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. 2023 ರ ಮೇ. 5 ರಂದು ʼಕೇರಳ ಸ್ಟೋರಿʼ ಸಿನಿಮಾ ರಿಲೀಸ್‌ ಆಗಿತ್ತು. ಆರಂಭಿಕ ದಿನಗಳಲ್ಲಿ ಅಷ್ಟು ಸದ್ದು ಮಾಡದ ಸಿನಿಮಾ ವಾರದ ಬಳಿಕ ಎಲ್ಲೆಡೆ ಹೌಸ್‌ ಫುಲ್‌ ಪ್ರದರ್ಶನ ಕಂಡಿತು.

ಚಿತ್ರದಲ್ಲಿನ ಹಲವು ವಿಚಾರಗಳು ವ್ಯಾಪಕ ವಿವಾದಕ್ಕೀಡಾಗಿದ್ದವು. ಪ್ರಮುಖವಾಗಿ ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ. ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್‌ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್‌ ನಲ್ಲಿ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ, ಇದು ಸುಳ್ಳು ಎಂದ ಬಳಿಕ ಸಿನಿಮಾ ತಂಡ 32 ಸಾವಿರ ಮಹಿಳೆಯರು ಎನ್ನುವ ದೃಶ್ಯ ಸೇರಿ ಅನೇಕ ದೃಶ್ಯವನ್ನು ತೆಗೆದು ಹಾಕಿತ್ತು. ಸಿನಿಮಾ ಸಿನಿಮಾ ಎಷ್ಟು ಗಳಿಕೆ ಕಂಡಿತ್ತೋ ಕೆಲವರಿಂದ ಅಷ್ಟೇ ಟೀಕೆಗಳನ್ನೂ ಎದುರಿಸಿತು.

ಈ ಕಾರಣದಿಂದ ಸಿನಿಮಾದ ಓಟಿಟಿ ಖರೀದಿಗೆ ಯಾವ ಫ್ಲಾಟ್‌ ಫಾರ್ಮ್‌ ಕೂಡ ಮುಂದೆ ಬಂದಿರಲಿಲ್ಲ ಎನ್ನಲಾಗಿತ್ತು. ಇದೀಗ 'ಕೇರಳ ಸ್ಟೋರಿ' ಓಟಿಟಿ ರಿಲೀಸ್‌ ಗೆ ದಿನ ನಿಗದಿಯಾಗಿದ್ದು, ಜೀ5 ಸಿನಿಮಾದ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದ್ದು, 'ದಿ ಕೇರಳ ಸ್ಟೋರಿ' ಇದೇ ಫೆಬ್ರವರಿ 16 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಸ್ಟ್ರೀಮ್‌ ಆಗಲಿದೆ.

ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದು, ವಿವಾದದಿಂದ ಸದ್ದು ಮಾಡಿದ ಅದಾ ಶರ್ಮಾ ಅವರ 'ಕೇರಳ ಸ್ಟೋರಿ' ಬಾಕ್ಸ್‌ ಆಫೀಸ್‌ ನಲ್ಲಿ 300 ಕೋಟಿ ಕಮಾಯಿ ಮಾಡಿತ್ತು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT