ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಮದುವೆಯಾಗಿ ಒಂದೇ ವಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿರುವುದು ನೆಟ್ಟಿಗರ ಚರ್ಚೆ ಗ್ರಾಸವಾಗಿದೆ. ಸೋನಾಕ್ಷಿ ಪ್ರೆಗ್ನೆನ್ಸಿ ಸುದ್ದಿ ಘೋಷಣೆ ಮಾಡುತ್ತಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ಮದುವೆಯಾಗಿ ಕೆಲವೇ ದಿನಗಳು ಕಳೆದ ಬಳಿಕ ಶುಕ್ರವಾರ(ಜೂ.28 ರಂದು) ಸೋನಾಕ್ಷಿ -ಜಹೀರ್ ಮುಂಬೈಯ ಖಾಸಗಿ ಆಸ್ಪತ್ರೆಯೊಂದಿಗೆ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಕಣ್ಣಪ್ತಿಸಿ ಆಸ್ಪತ್ರೆಗೆ ಹೋಗಲು ದಂಪತಿ ಯತ್ನಿಸಿದ್ದಾರೆ.
ಬಾಲಿವುಡ್‌ನಲ್ಲಿ ಪ್ರೆಗ್ನೆಂಟ್ ಆದ್ಮೇಲೆ ಮದುವೆಯಾಗುವುದು ಟ್ರೆಂಡ್ ಆಗಿದೆ. ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿ, ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಜೋಡಿ, ಶ್ರೀದೇವಿ ಮತ್ತು ಬೋನಿ ಕಪೂರ್ ಜೋಡಿ ಸೇರಿದಂತೆ ಅನೇಕರು ಸೆಲೆಬ್ರಿಟಿಗಳು ಈ ಟ್ರೆಂಡ್ ಫಾಲೋ ಮಾಡಿದ್ದಾರೆ.
ಅದರಂತೆ ಸೋನಾಕ್ಷಿ, ಮತ್ತು ಝಹೀರ್ ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ. ಇಬ್ಬರೂ ಜೂನ್ 23ರಂದು ತರಾತುರಿಯಲ್ಲಿ ಮದುವೆಯಾದರು. ಇವರ ಮದುವೆ ಗುಟ್ಟಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ನಟಿ ಇಷ್ಟು ಆತುರದಲ್ಲಿ ಮದುವೆಯಾದ್ರಾ? ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಸಿಗುತ್ತಾ ಕಾಯಬೇಕಿದೆ.
ಯಾವ ಕಾರಣಕ್ಕಾಗಿ ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನುವುದರ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಆದರೆ ನೆಟ್ಟಿಗರು ಸೋನಾಕ್ಷಿ ಗರ್ಭಿಣಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆಲಿಯಾ ಭಟ್ ಮದುವೆಯಾದ ಕೆಲವೇ ದಿನಗಳ ಬಳಿಕ ತಾಯಿ ಆಗುವ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದರು. ಸೋನಾಕ್ಷಿ ವಿಚಾರದಲ್ಲೂ ಹೀಗೆಯೇ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.