ಇಜಾಬೆಲ್ಲೆ ಲೈಟ್ - ವಿರಾಟ್ ಕೊಹ್ಲಿ 
ಬಾಲಿವುಡ್

ಜರ್ಮನ್ ಮಾಡೆಲ್ ಫೋಟೋಗೆ ಲೈಕ್; ವಿವಾದದ ನಂತರ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ ಮಾಜಿ ಪ್ರೇಯಸಿ!

ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆ ಎರಡನೇ ಬಾರಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ, ಅವರು ಅವನೀತ್ ಕೌರ್ ಅವರ ಚಿತ್ರವನ್ನು ಲೈಕ್ ಮಾಡಿದ್ದು ಸುದ್ದಿಯಾಗಿತ್ತು.

ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಎರಡನೇ ಬಾರಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ, ಅವರು ಅವನೀತ್ ಕೌರ್ ಅವರ ಚಿತ್ರವನ್ನು ಲೈಕ್ ಮಾಡಿದ್ದು ಸುದ್ದಿಯಾಗಿತ್ತು.

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಆದರೆ, ಈ ಬಾರಿ ಅದು ದಾಖಲೆಗಳನ್ನು ಮುರಿದಿರುವುದರಿಂದ ಅಲ್ಲ. ಇತ್ತೀಚೆಗೆ ಅವರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಖಾತೆಯಿಂದ ಜರ್ಮನ್ ಮಾಡೆಲ್ ಒಬ್ಬರ ಪೋಸ್ಟ್‌ಗೆ 'ಲೈಕ್' ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮೀಮ್ಸ್ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.

ಆದರೆ, ಈ ನಡುವೆ, ವಿರಾಟ್ ಕೊಹ್ಲಿ ಅವರ ಮಾಜಿ ಪ್ರೇಯಸಿ ಇಜಾಬೆಲ್ಲೆ ಲೈಟ್ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಮೌನ ಮುರಿದ ಇಜಾಬೆಲ್ಲೆ

ಇನ್‌ಸ್ಟಾಗ್ರಾಂ ಪುಟವೊಂದರಲ್ಲಿ ಇಜಾಬೆಲ್ಲೆ, ಅನುಷ್ಕಾ ಶರ್ಮಾ, ಜರ್ಮನ್ ಮಾಡೆಲ್ ಲಿಜ್‌ಲಾಜ್ ಮತ್ತು ಅವನೀತ್ ಕೌರ್ ಅವರ ಕೊಲಾಜ್ ಅನ್ನು ಹಂಚಿಕೊಂಡಿತ್ತು. ಇವರೆಲ್ಲರೂ ಹಿಂದಿನ ಸಂಬಂಧಗಳ ಮೂಲಕ ಅಥವಾ ಲೈಕ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಜೊತೆಗೆ ಸಂಪರ್ಕ ಹೊಂದಿದ ಮಹಿಳೆಯರು.

ಪೋಸ್ಟ್‌ಗೆ, 'ವಿರಾಟ್ ಕೊಹ್ಲಿ ಬಗ್ಗೆ ಒಂದು ವಿಷಯ ಏನೆಂದರೆ, ಮೈದಾನದಲ್ಲಿರಲಿ ಅಥವಾ ಹೊರಗಿರಲಿ ಸ್ಪಷ್ಟವಾಗಿ ಒಂದು ವಿಷಯದಿಂದ ತಪ್ಪಿಸಿಕೊಳ್ಳುವುದಿಲ್ಲ. ಅವರು ಉತ್ತಮ ಆಯ್ಕೆಗಳನ್ನು ಮಾಡುತ್ತಾರೆ. ಇಜಾಬೆಲ್ಲೆ ಲೈಟ್‌ನಿಂದ ಅನುಷ್ಕಾ ಶರ್ಮಾವರೆಗೆ... ಎಲೈಟ್ ಅಭಿರುಚಿಯನ್ನು ಹೊಂದಿದ್ದಾರೆ' ಎಂದು ಶೀರ್ಷಿಕೆ ನೀಡಲಾಗಿದೆ.

ಈ ಪೋಸ್ಟ್‌ನಿಂದ ಖುಷಿಪಡದ ಇಜಾಬೆಲ್ಲೆ, 'ಇದಾಗಿ 12 ವರ್ಷಗಳು ಕಳೆದಿವೆ ಮತ್ತು ಇನ್ನೂ ಮುಂದುವರಿಯುತ್ತಿದೆ. ಜನರು ಅದನ್ನು ಏಕೆ ಮೀರಲು ಸಾಧ್ಯವಿಲ್ಲ' ಎಂದು ಕಮೆಂಟ್ ಮಾಡಿದ್ದಾರೆ. ಅವರ ಪ್ರತಿಕ್ರಿಯೆಯು ತ್ವರಿತವಾಗಿ ಗಮನ ಸೆಳೆಯಿತು, ಅನೇಕ ಬಳಕೆದಾರರು ಅವರ ಹತಾಶೆಯನ್ನು ತೋರಿಸುತ್ತಿದೆ ಎಂದಿದ್ದಾರೆ.

ವಿವಾದ

ವಿರಾಟ್ ಕೊಹ್ಲಿ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯು ಎರಡನೇ ಬಾರಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ, ಅವರು ಅವನೀತ್ ಕೌರ್ ಅವರ ಚಿತ್ರವನ್ನು ಲೈಕ್ ಮಾಡಿದಾಗ ಅಭಿಮಾನಿಗಳು ಅದನ್ನು ಪತ್ತೆಹಚ್ಚಿದ್ದರು.

ಅದರ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದ್ದಂತೆ, ಸ್ಪಷ್ಟೀಕರಣ ನೀಡಿದ ವಿರಾಟ್ ಕೊಹ್ಲಿ, ಅದು 'ಅಲ್ಗಾರಿದಮ್ ದೋಷ' ಎಂದು ಆರೋಪಿಸಿದರು.

ಕಳೆದ ವಾರ, ಜರ್ಮನ್ ವ್ಲಾಗರ್ ಲಿಜ್‌ಲಾಜ್ ಅವರ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಖಾತೆಯಿಂದ ಲೈಕ್ ಮಾಡಿರುವುದನ್ನು ಬಳಕೆದಾರರು ಗುರುತಿಸಿದರು. ಮತ್ತೆ ಇದು ಅಲ್ಗಾರಿದಮ್ ದೋಷವೇ ಇರಬಹುದು ಎಂದು ಸಾಕಷ್ಟು ಮೀಮ್ಸ್‌ಗಳು ಹರಿದಾಡಿದವು.

ಲಿಜ್‌ಲಾಜ್ ಪ್ರತಿಕ್ರಿಯೆ

'ಇಲ್ಲ, ನನಗೆ ಅವರ ಬಗ್ಗೆ ಸ್ವಲ್ಪ ವಿಷಾದವಾಯಿತು. ಅವರು ಲೈಕ್ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ಆದರೆ, ನಂತರ ಡಿಸ್‌ಲೈಕ್ ಮಾಡಿದ್ದು, ಅವರ ಬಗ್ಗೆ ನನಗೆ ಸ್ಯಾಡ್ ಎನಿಸಿತು. ಅದು ಹೇಗೆ ಅಷ್ಟು ದೊಡ್ಡ ಸುದ್ದಿಯಾಯಿತು ಎಂದು ನನಗೆ ತಿಳಿದಿಲ್ಲ. ಜನರು ಅದನ್ನು ಹೇಗೆ ಗಮನಿಸಿದರು? ಅವರು ಅದನ್ನು ಹೇಗೆ ಸುದ್ದಿ ಮಾಡಿದರು? ಬಹುಶಃ ಅದು ಅವರ ಉದ್ದೇಶವಾಗಿರಲಿಲ್ಲ, ಆದರೆ ನಾನು ಅದಕ್ಕೆ ಕೃತಜ್ಞಳಾಗಿದ್ದೇನೆ ಮತ್ತು ಅವರಿಂದ ಬಂದ ಬೆಂಬಲಕ್ಕೆ ನಾನು ಕೃತಜ್ಞಳಾಗಿದ್ದೇನೆ' ಎಂದು ಲಿಜ್‌ಲಾಜ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು.

'ನಾನು ಎಚ್ಚರವಾಗುವ ವೇಳೆಗೆ ಇದು ಇಷ್ಟು ದೊಡ್ಡ ಸುದ್ದಿಯಾಗಿದ್ದು ನನಗೆ ಹುಚ್ಚುತನದಂತೆ ಕಂಡಿತು. ಅವರು ಯಾವಾಗ ಲೈಕ್ ಮಾಡಿದರು ಎಂಬುದು ನನಗೆ ತಿಳಿದಿರಲಿಲ್ಲ ಮತ್ತು ಅದು ನ್ಯೂಸ್ ಮೂಲಕ ತಿಳಿಯಿತು. ನನ್ನ ಬಗ್ಗೆ ವಿವಿಧ ವೇದಿಕೆಗಳಲ್ಲಿ ಬರೆದ ಲೇಖನಗಳನ್ನು ಹಲವಾರು ಜನರು ಕಂಡು ನನಗೆ ಡಿಎಂಗಳಲ್ಲಿ ಕಳುಹಿಸಿದ್ದಾರೆ. ಇಂದು ನನಗೆ ತುಂಬಾ ಸಂದೇಶಗಳು ಬಂದವು; ಜನರು ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದರು' ಎಂದು ಅವರು ಹೇಳಿದರು.

ಇಜಾಬೆಲ್ಲೆ ಲೈಟ್ -ವಿರಾಟ್ ಕೊಹ್ಲಿ ಸಂಬಂಧ

ಇಜಾಬೆಲ್ಲೆ ಲೈಟ್ 2014 ರಲ್ಲಿ ತಾನು ಮತ್ತು ವಿರಾಟ್ ಕೊಹ್ಲಿ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದಾಗಿ ದೃಢಪಡಿಸಿದ್ದರು. ತಮ್ಮ 'ಪುರಾನಿ ಜೀನ್ಸ್' ಚಿತ್ರದ ಪ್ರಚಾರದ ಸಮಯದಲ್ಲಿ ಅವರು ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದರು.

ಕ್ರಿಕೆಟಿಗ ನಂತರ 2017ರಲ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು. ಈ ದಂಪತಿಗೆ ಈಗ 2021 ರಲ್ಲಿ ಜನಿಸಿದ ಮಗಳು ವಮಿಕಾ ಮತ್ತು 2024 ರಲ್ಲಿ ಜನಿಸಿದ ಮಗ ಅಕಾಯ್‌ಗೆ ಪೋಷಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕದನ ವಿರಾಮ ವಿಸ್ತರಿಸುತ್ತೇವೆ, ಇರಾನ್‌ಗೆ ಮಾತುಕತೆಗೆ ಸಮಯ ನೀಡುತ್ತೇವೆ; ಹಾರ್ಮುಜ್ ಜಲಸಂಧಿ ನಿರ್ಬಂಧ ಮುಂದುವರಿಕೆ': ಡೊನಾಲ್ಡ್ ಟ್ರಂಪ್

ಪಹಲ್ಗಾಮ್ ಉಗ್ರರ ದಾಳಿಗೆ ಒಂದು ವರ್ಷ: ಯಾವುದೇ ರೀತಿಯ ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗಲ್ಲ; ಶತ್ರುಗಳಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್

ಏ.23ರಿಂದ CET ಪರೀಕ್ಷೆ: 3.3 ಲಕ್ಷ ಅಭ್ಯರ್ಥಿಗಳು ನೋಂದಣಿ; 745 ಕೇಂದ್ರಗಳಲ್ಲಿ ವಸ್ತ್ರಸಂಹಿತೆ ನಿರ್ವಹಣೆಗೆ ಅಧಿಕಾರಿಗಳ ನಿಯೋಜನೆ

ಬಿಟ್‌ಕಾಯಿನ್ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ: ಗೃಹ ಸಚಿವ ಡಾ ಜಿ ಪರಮೇಶ್ವರ್

ಟ್ರಂಪ್ ನಂತರ, ಈಗ ಪಾಕ್ ಪ್ರಧಾನಿ, Pak ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ನಿರ್ಣಯ ಮಂಡನೆ!

SCROLL FOR NEXT