ಸಲ್ಮಾನ್ ಖಾನ್  
ಬಾಲಿವುಡ್

'Kala Hiran' ತಂಡಕ್ಕೆ ಸಲ್ಮಾನ್ ಖಾನ್ ಲೀಗಲ್ ನೋಟಿಸ್! ಬೆದರಿಸುವ ತಂತ್ರ ಎಂದ ನಿರ್ಮಾಪಕರು; ಏನಿದು ವಿವಾದ?

ಲೀಗಲ್ ನೋಟಿಸ್ ನ್ನು ಫೇಸ್ ಬುಕ್ ನಲ್ಲಿ ನಿರ್ಮಾಪಕ ಅಮಿತ್ ಜಾನಿ, ಇದು ಬೆದರಿಸುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಬೆದರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ 'ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ' ಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಚಿತ್ರ ಬಿಡುಗಡೆಗೆ ತಡೆ ಬಯಸಿದ್ದಾರೆ.

ಚಿತ್ರದ ಎಲ್ಲಾ ಪೋಸ್ಟರ್‌ಗಳು, ಪ್ರಚಾರ ಸಾಧನಗಳು ಮತ್ತು ಹೆಸರನ್ನು ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸದಿದ್ದರ್ರೆ ಮತ್ತಷ್ಟು ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಚಿತ್ರತಂಡಕ್ಕೆ ಸಲ್ಮಾನ್ ಖಾನ್ ಕಳುಹಿಸಿರುವ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಲೀಗಲ್ ನೋಟಿಸ್ ನ್ನು ಫೇಸ್ ಬುಕ್ ನಲ್ಲಿ ನಿರ್ಮಾಪಕ ಅಮಿತ್ ಜಾನಿ, ಇದು ಬೆದರಿಸುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸುವ ಮೂಲಕ ಜನರನ್ನು ಬೆದರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜನರನ್ನು ಎದುರಿಸುದು ಈ ಲೀಗಲ್ ನೋಟಿಸ್ ನ ಉದ್ದೇಶ. ನಟರ ಮುಂದೆ ತಲೆಬಾಗಬೇಕು ಎಂದು ಅವರು ಅಂದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

'ಕಾಲಾ ಹಿರನ್ ಸಲ್ಮಾನ್ ಖಾನ್ ಅವರ 1998 ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾಗಿದೆ ಎಂಬ ಅಂಶ ತಿಳಿದುಬಂದ ನಂತರ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನೋಟಿಸ್‌ನ ಒಂದು ಭಾಗ ಹೇಳುತ್ತದೆ. ಈ ಚಿತ್ರ ಕೃಷ್ಣ ಮೃಗ ಭೇಟಿ ಪ್ರಕರಣದಿಂದ ಪ್ರೇರಿತವಾಗಿದೆ ಎಂಬುದು ಗಮನಕ್ಕೆ ಬಂದ ನಂತರ ನಮ್ಮ ಕಕ್ಷಿದಾರರ ಆಘಾತ ಮತ್ತು ನಿರಾಶೆಗೆ ಕಾರಣವಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

ನೋಟಿಸ್ ಹೊರತಾಗಿಯೂ ನಿರ್ಮಾಪಕರು ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಭರತ್ ಎಸ್ ಶ್ರೀನೇಟ್ ನಿರ್ದೇಶಿಸಿದ್ದಾರೆ ಮತ್ತು ಅಮಿತ್ ಜಾನಿ ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ