Ramayana: ಆಸ್ಕರ್ ರೇಸ್‌ಗೆ 'ರಾಮಾಯಣ' ಎಂಟ್ರಿ; VFX ಟಾಪ್ 20ಯಲ್ಲಿ ಸ್ಥಾನ ಪಡೆದ ಯಶ್ ಸಿನಿಮಾ!
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ 99ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಯ 'ವಿಷುವಲ್ ಎಫೆಕ್ಟ್ಸ್' (VFX) ವಿಭಾಗದಲ್ಲಿ ಅಗ್ರ 20 ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ 1: ರೈಸ್ ಆಫ್ ಎ ಲೆಜೆಂಡ್' ಇದೀಗ ಆಸ್ಕರ್ 2027 ಅಂಗಳಕ್ಕೆ ಪ್ರವೇಶ ಪಡೆದಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ 99ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಯ 'ವಿಷುವಲ್ ಎಫೆಕ್ಟ್ಸ್' (VFX) ವಿಭಾಗದಲ್ಲಿ ಅಗ್ರ 20 ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ಪಟ್ಟಿಯಲ್ಲಿ 'ಡ್ಯೂನ್: 3', 'ದಿ ಒಡಿಸ್ಸಿ' ಮತ್ತು 'ಅವೆಂಜರ್ಸ್: ಡೂಮ್ಸ್‌ಡೇ'ಯಂತಹ ಜಾಗತಿಕ ಮಟ್ಟದ ಚಿತ್ರಗಳೂ ಸ್ಥಾನ ಪಡೆದಿವೆ.
ಇಷ್ಟೇ ಅಲ್ಲದೆ, 2025ರಲ್ಲಿ ಆಸ್ಕರ್ ಗೆದ್ದಿದ್ದ ಗಾಡ್ಜಿಲ್ಲಾ ಮೈನಸ್ ಒನ್ ಸಿನಿಮಾದ ಮುಂದುವರಿದ ಭಾಗವಾದ ಜಪಾನ್‌ನ ಬ್ಲಾಕ್‌ಬಸ್ಟರ್ ಚಿತ್ರ ಗಾಡ್ಜಿಲ್ಲಾ: ಮೈನಸ್ ಝೀರೋ ಹಾಗೂ ವೇಲ್‌ಫಾಲ್, ದಿ ಶೀಪ್ ಡಿಟೆಕ್ಟಿವ್ಸ್ ಚಿತ್ರಗಳೂ ಈ ಟಾಪ್ 20 ಪಟ್ಟಿಯಲ್ಲಿವೆ. ಇಂತಹ ಘಟಾನುಘಟಿ ಸಿನಿಮಾಗಳ ನಡುವೆ ಭಾರತದ ಸಿನಿಮಾವೊಂದು ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.
'ವರೈಟಿ'(Variety) ಮ್ಯಾಗಜೀನ್ ವರದಿಯ ಪ್ರಕಾರ, ಈ 20 ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಯ ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ. 'ವರೈಟಿ'ಯು ವಿವಿಧ ಮೂಲಗಳ ಮೂಲಕ ಈ ಪಟ್ಟಿಯನ್ನು ಖಚಿತಪಡಿಸಿಕೊಂಡಿದೆ.
'ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್' ಸಂಸ್ಥೆಯು ಅಗ್ರ 20 ಚಲನಚಿತ್ರಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ.