ಹನುಮಾನ್ ಅಂಶ್ ಚಿತ್ರ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಭಕ್ತಿ': 200 ಕೋಟಿ ಕ್ಲಬ್‌ಗೆ ಲಗ್ಗೆ ಇಟ್ಟ Hanuman Ansh

ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಲಕ್ಷ್ಮೀನಾರಾಯಣ ಎಂಬ ಯುವಕನ ಆಧ್ಯಾತ್ಮಿಕ ಪಯಣವನ್ನು ಚಿತ್ರಿಸಲಾಗಿದೆ.

ಮುಂಬೈ: ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದ ‘ಹನುಮಾನ್ ಅಂಶ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದು, ಬಾಕ್ಸಾಫೀಸ್ ನಲ್ಲಿ 200 ಕೋಟಿ ಗೂ ಅಧಿಕ ಗಳಿಕೆ ಕಂಡಿದೆ.

ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಲಕ್ಷ್ಮೀನಾರಾಯಣ ಎಂಬ ಯುವಕನ ಆಧ್ಯಾತ್ಮಿಕ ಪಯಣವನ್ನು ಚಿತ್ರಿಸಲಾಗಿದೆ.

ದೇವರ ಹುಡುಕಾಟದಲ್ಲಿ ಉತ್ತರ ಭಾರತದ ವಿವಿಧೆಡೆ ಸಂಚರಿಸುವ ಆತ, ಜೀವನ, ಸಾವು ಹಾಗೂ ಮಾನವನ ನೋವಿನ ಕುರಿತ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾನೆ. ಈ ಪಯಣದ ಮೂಲಕ ಮುಂದೆ ಆತ ಭಕ್ತರಿಂದ ಪೂಜಿಸಲ್ಪಟ್ಟ ಸಂತ ನೀಮ್ ಕರೋಲಿ ಬಾಬಾ ಆಗಿ ರೂಪಾಂತರಗೊಳ್ಳುತ್ತಾನೆ.

ಪ್ರೀತಿ, ಸೇವೆ ಮತ್ತು ಕರುಣೆಯ ಸಂದೇಶವನ್ನು ಸಾರಿದ ನೀಮ್ ಕರೋಲಿ ಬಾಬಾ ಅವರ ಬೋಧನೆಗಳು ಅಸಂಖ್ಯಾತ ಜನರ ಬದುಕಿನ ಮೇಲೆ ಪ್ರಭಾವ ಬೀರಿದ್ದವು. ಚಿತ್ರದಲ್ಲಿ ಶೋಭಿನವ್ ಸತ್ಯ ನಾಯಕನಾಗಿ ನಟಿಸಿದ್ದು, ವಿಹಾನ್ ಶೆಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಾಸ್ತೋಗಿ, ಗುಲ್ಶನ್ ಪಾಂಡೆ ಹಾಗೂ ಭಗವಂದಾಸ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

200 ಕೋಟಿ ರೂ ಗಳಿಕೆ

ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ Sacnilk ವರದಿ ಪ್ರಕಾರ, ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಇದುವರೆಗೆ 205.73 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ನೆಟ್ ಕಲೆಕ್ಷನ್ 170 ಕೋಟಿಗೂ ಅಧಿಕವಾಗಿದೆ.

ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಹನುಮಾನ್ ಅಂಶ್’ ಆರಂಭದಲ್ಲಿ ನಿಧಾನಗತಿಯ ಪ್ರದರ್ಶನ ಕಂಡಿತ್ತು. ಮೊದಲ ಎರಡು ವಾರಗಳಲ್ಲಿ ನಿರೀಕ್ಷಿತ ಮಟ್ಟದ ಗಳಿಕೆ ಮಾಡಿರಲಿಲ್ಲ. ಆದರೆ ಪ್ರೇಕ್ಷಕರಿಂದ ಸಿಕ್ಕ ಉತ್ತಮ ಪ್ರತಿಕ್ರಿಯೆ ಹಾಗೂ ಮೌತ್‌ ಪಬ್ಲಿಸಿಟಿಯಿಂದಾಗಿ ನಂತರ ಚಿತ್ರಕ್ಕೆ ಬೇಡಿಕೆ ಹೆಚ್ಚಾಯಿತು.

ಆರಂಭದಲ್ಲಿ ಕೇವಲ 250 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಚಿತ್ರ ಇದೀಗ ಬಾಕ್ಸ್ ಆಫೀಸ್ ಯಶಸ್ಸಿನ ಹಿನ್ನೆಲೆಯಲ್ಲಿ 2,000 ಸ್ಕ್ರೀನ್‌ಗಳಿಗೆ ವಿಸ್ತರಿಸಲಾಗಿದೆ.

37ನೇ ದಿನದ ವೇಳೆಗೆ ‘ಹನುಮಾನ್ ಅಂಶ’ ದೇಶಾದ್ಯಂತ 2,420 ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಶುಕ್ರವಾರದ ಲೈವ್ ಕಲೆಕ್ಷನ್ ಪ್ರಕಾರ, ಚಿತ್ರವು ಒಂದೇ ದಿನದಲ್ಲಿ 1.05 ಕೋಟಿ ರೂ ನೆಟ್ ಗಳಿಕೆ ದಾಖಲಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತ ಗ್ರಾಸ್ ಕಲೆಕ್ಷನ್ 206.39 ಕೋಟಿ ರೂಗೆ ತಲುಪಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 174.68 ಕೋಟಿ ರೂ ಗೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಜೈಲಿನಲ್ಲಿದ್ದರೂ ಹಳೆಯ ಚಾಳಿ ಬಿಡದ ಪ್ರಜ್ವಲ್ ರೇವಣ್ಣ: ಪೆನ್ ಡ್ರೈವ್ ನೋಡಿ ಪೊಲೀಸರು ಶಾಕ್!

ಭಯೋತ್ಪಾದಕರಿಗೆ ನೆರವು: ಮೋಸ್ಟ್ ವಾಂಟೆಡ್ ಹಫೀಜ್ ಸಯೀದ್ ವಿರುದ್ಧ 2ನೇ ಬಾರಿಗೆ 'ಜಾಮೀನು ರಹಿತ ವಾರೆಂಟ್' ಹೊರಡಿಸಿದ NIA ನ್ಯಾಯಾಲಯ!

ಪತ್ರಕರ್ತ ಜಿ. ಮಹಂತೇಶ್ ಗೆ ಜೀವ ಬೆದರಿಕೆ: FIR ದಾಖಲು!