ಸಿನಿಮಾ ಸುದ್ದಿ

ನಟಿ ಗೌಹರ್ ಖಾನ್ ಬಳಿಕ ನಟಿ ಸನ್ನಿ ಲಿಯೋನ್ ಮೇಲೆ ಹಲ್ಲೆಗೆ ಯತ್ನ!

Vishwanath S

ಮುಂಬೈ: ತುಂಡುಡುಗೆ ಹಾಕಿಕೊಂಡಿದ್ದಾಳೆಂಬ ಕಾರಣಕ್ಕೆ ಬಾಲಿವುಡ್ ನಟಿ ಗೌಹರ್ ಖಾನ್ ಮೇಲೆ ಆಗಂತುಕನೊಬ್ಬ ಹಲ್ಲೆ ನಡೆಸಿದ್ದ ಘಟನೆ ಹಸಿರಾಗಿರುವಾಗಲೇ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.

ಲೀಲಾ ಚಿತ್ರದ ಸೆಟ್‌ನಲ್ಲಿ ಸನ್ನಿ ಲಿಯೋನ್‌ಗೆ ಇಂಥದ್ದೊಂದು ಕಹಿ ಅನುಭವವಾಗಿದೆ. ಲೀಲಾ ಚಿತ್ರದಲ್ಲಿ ಸನ್ನಿ ತುಂಡುಡುಗೆ ತೊಟ್ಟು ಸೆಟ್‌ನಲ್ಲಿದ್ದ ವೇಳೆ ಅಲ್ಲಿಗೆ ಬಂದ ಆಗಂತುಕ ಯುವಕನೊಬ್ಬ ಲಿಯೋನ್ ಜೊತೆ ವಾಗ್ವಾದಕ್ಕೀಳಿದು ಕಪಾಳ ಮೋಕ್ಷ ಮಾಡಲು ಮುಂದಾಗಿದ್ದಾನೆ.

ತಕ್ಷಣ ಸೆಟ್‌ನಲ್ಲಿದ್ದ ಸಹ ನಟ ಮೋಹಿತ್ ಮಧ್ಯೆ ಪ್ರವೇಶಿಸಿ ಆಗುಂತಕನನ್ನು ನೂಕಿ ಹೊರ ಕಳುಹಿಸಿದ್ದಾನೆ. ಇದರೊಂದಿಗೆ ಅನಾಹುತವೊಂದು ತಪ್ಪಿದೆ. ಇದರಿಂದ ಆತಂಕಗೊಂಡ ಸನ್ನಿ ಲಿಯೋನ್ ಶೂಟಿಂಗ್ ಸ್ಟಾಟ್‌ನಲ್ಲಿ ಸೂಕ್ತ ಭದ್ರತೆ ಸಿಗುವವರೆಗೂ ಶೂಟಿಂಗ್‌ಗೆ ಬುರುವುದಿಲ್ಲ ಎಂದು ಕೋಪಗೊಂಡು ಸಹಾಯಕಿ ಜತೆ ಹೊರನಡೆದಿದ್ದಾರೆ ಎನ್ನಲಾಗಿದೆ.

SCROLL FOR NEXT