ಸಿನಿಮಾ ಸುದ್ದಿ

ಸ್ಟಿವ್ ಜಾಬ್ಸ್ ಜೀವನಾಧಾರಿತ ಸಿನೆಮಾದಲ್ಲಿ ಕೇಟ್ ವಿನ್ಸ್ಲೆಟ್ ನಟಿಸಲಿದ್ದಾರೆಯೇ?

Guruprasad Narayana

ಲಾಸ್ ಎಂಜಲಿಸ್: ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸುತ್ತಿರುವ ಡ್ಯಾನಿ ಬಾಯ್ಲ್, ಸಿನೆಮಾದಲ್ಲಿ ಮುಖ್ಯ ಪಾತ್ರವನ್ನು ಪೋಷಿಸಲು ನಟಿ ಕೇಟ್ ವಿನ್ಸ್ಲೆಟ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೈಕೆಲ್ ಫಾಸ್ ಬೆಂಡರ್, ಸ್ಟೀವ್ ಜಾಬ್ಸ್ ಪಾತ್ರವನ್ನು ಪೋಷಿಸುತ್ತಿದ್ದು, ಆಪಲ್ ಸಂಸ್ಥೆಯ ಮತ್ತೊಬ್ಬ ಸಹ ಸಂಸ್ಥಾಪಕ ವಾಜ್ನೈಕ್ ಪಾತ್ರವನ್ನು ಸೆಥ್ ರೋಗನ್ ನಿರ್ವಹಿಸುತ್ತಿದ್ದಾರೆ.

ವಾಲ್ಟರ್ ಐಸಾಕ್ ಸನ್ ಅವರ ಸ್ಟೀವ್ ಜಾಬ್ಸ್ ಜೀವನ ಚರಿತ್ರೆ ಪುಸ್ತಕ ಆಧಾರಿತ ಈ ಸಿನೆಮಾ ಮೊದಲು ಸೋನಿ ಪಿಕ್ಚರ್ಸ್ ನಿರ್ಮಿಸಬೇಕಿತ್ತು ಆದರೆ ಈಗ ಯೂನಿವರ್ಸಲ್ ನಿರ್ಮಾಣ ಸಂಸ್ಥೆ ಇದನ್ನು ನಿರ್ಮಿಸುತ್ತಿದೆ.

SCROLL FOR NEXT