ಡರ್ಟಿ ಪಾಲಿಟಿಕ್ಸ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ಮುಜುಗರಪಟ್ಟ ಮಲ್ಲಿಕಾ!

ಬಾಲಿವುಡ್ ಹಾಟ್ ನಟಿ ಮಲ್ಲಿಕಾ...

ಮುಂಬೈ: ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಎಂಥೆಂಥಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿಲ್ಲಾ..! ಆದರೆ ಮೊದಲ ಬಾರಿಗೆ 'ಡರ್ಟಿ ಪಾಲಿಟಿಕ್ಸ್' ಚಿತ್ರದ ಶೂಟಿಂಗ್‌ನಲ್ಲಿ ಹಿರಿಯ ನಟ ಓಂಪುರಿ ಅವರೊಂದಿಗೆ ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನನಗೆ ತುಂಬಾ ಮುಜುಗರವಾಯಿತು ಎಂದು ಶೆರವಾತ್ ಹೇಳಿಕೊಂಡಿದ್ದಾಳೆ.

ಡರ್ಟಿ ಪಾಲಿಟಿಕ್ಸ್ ಚಿತ್ರದಲ್ಲಿ ಮಲ್ಲಿಕಾ ಶೆರವಾತ್ ಹಾಗೂ ನಟ ಓಂಪುರಿ ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆ.ಸಿ ಬೊಕಾಡಿಯಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಓಂಪುರಿಯೊಂದಿಗೆ ರೋಮ್ಯಾನ್ಸ್ ಮಾಡುವ ದೃಶ್ಯಗಳಿವೆ. ಓಂಪುರಿಯೊಂದಿಗೆ ರೋಮ್ಯಾನ್ಸ್ ಮಾಡುವಾಗ ತುಂಬಾ ಮುಜುಗರವಾಯಿತು ಎಂದು ಮಲ್ಲಿಕಾ ಹೇಳಿದ್ದಾಳೆ.

ದೇಶದ ಗಮನವನ್ನು ಸೆಳೆದಿದ್ದ ಭನ್ವರಿ ದೇವಿ ಸೆಕ್ಸ್ ಸ್ಕ್ಯಾಂಡಲ್‌ನ ಅವರು ನಿಜ ಜೀವನದ ಕಥೆಯನ್ನು ಡರ್ಟಿ ಪಾಲಿಟಿಕ್ಸ್ ಚಿತ್ರ ಹೊಂದಿದೆ. ಇದರಲ್ಲಿ ಭನ್ವರಿ ದೇವಿ ಅವರ ಪಾತ್ರದಲ್ಲಿ ಮಲ್ಲಿಕಾ ನಟಿಸುತ್ತಿದ್ದಾರೆ. ರಾಜಕಾರಣಿಯಾಗಿ ಓಂಪುರಿ ನಟಿಸುತ್ತಿದ್ದು, ತನ್ನ ದೇಹಸಿರಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡು ಬಡ ಮಹಿಳೆ ಸಮಾಜದಲ್ಲಿ ಉನ್ನತಿ ಹೊಂದುವ ಕಥಾ ಹಂದರ ಈ ಚಿತ್ರಕ್ಕಿದೆ.

ಡರ್ಟಿ ಪಾಲಿಟಿಕ್ಸ್ ಚಿತ್ರದಲ್ಲಿ ಹಿರಿಯ ನಟರು ತಾರಾ ಬಳಗವೆ ಇದೆ. ನಾಸಿರುದ್ದೀನ್ ಶಾ, ಅನುಪಮ್ ಖೇರ್, ಜಾಕಿ ಶ್ರಾಫ್, ಅಶುತೋಷ್ ರಾಣಾ, ರಾಜಪಾಲ್ ಯಾದವ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ