ತಮನ್ನಾ 
ಸಿನಿಮಾ ಸುದ್ದಿ

ಕುದುರೆ-ಚದುರೆ

ಕುದುರೆ ಸವಾರಿ ಮಾಡೋಕೆ ತೂಕ ಇಳಿಸ್ಕೋಬೇಕಾ? ಹೂಂ ಅಂತಾಳೆ ತಮನ್ನಾ!

ಕುದುರೆ ಸವಾರಿ ಮಾಡೋಕೆ ತೂಕ ಇಳಿಸ್ಕೋಬೇಕಾ? ಹೂಂ ಅಂತಾಳೆ ತಮನ್ನಾ!

ಮೊದಲೇ... ಬಳುಕಿದ್ರೆ ಮುರಿದುಹೋಗ್ತಾಳೋ ಎಂಬಂತಿದ್ದ ತಮನ್ನಾ, ಕ್ವಿಂಟಾಲುಗಳ ತೂಕದ ಕುದುರೆಗೆ ಭಾರವೇ? ಆದರೆ ತಮನ್ನಾ ತೂಕ ಇಳಿಸಿರೋದು ಕುದುರೆಗೆ ಭಾರವಾದೇನೆಂಬ ಭಯಕ್ಕಲ್ಲ.

ಬಹು ನಿರೀಕ್ಷಿತ ರಾಜಮೌಳಿಯ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಆಕೆಗೆ ಸಾಹಸ ಸನ್ನಿವೇಶಗಳಿವೆಯಂತೆ. ಅವಂತಿಕಾ ಎಂಬ ರಾಜ ಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಬಲ್ಗೇರಿಯಾದಲ್ಲಿ ಕುದುರೆಯೇರಿ ಕತ್ತಿ-ಬೆಂಕಿ ಹಿಡಿದು ಯುದ್ಧವಾಡಿ ಶಭಾಶ್ ಎನಿಸಿಕೊಂಡಿದ್ದಾಳಂತೆ.

ಪ್ರಭಾಸ್, ರಾಣಾ ಮತ್ತು ಅನುಷ್ಕಾ ಜೊತೆಯಲ್ಲಿ ತಮನ್ನಾಳಿಗೂ ಕುದುರೆ ಸವಾರಿ, ಕತ್ತಿವರಸೆಯ ತರಬೇತಿ ನೀಡಿದಾಗಲೇ ತಮನ್ನಾಗೆ ತನ್ನ ಪಾತ್ರದ ಪ್ರಾಮುಖ್ಯತೆ ಅರಿವಾಗಿದ್ದಂತೆ! ಪ್ರತಿ ನಟನಟಿಯರಿಂದಲೂ ಹತ್ತು ಟೇಕ್‌ಗಳಲ್ಲೊಂದು ಬೆಸ್ಟ್ ಟೇಕ್ ಓಕೆ ಮಾಡುವ ರಾಜಮೌಳಿಯಂಥ ಪರ್ಫೆಕ್ಷನಿಸ್ಟ್ ಕೈಲಿ ಹೆಚ್ಚೂ ಕಮ್ಮಿ ತನ್ನೆಲ್ಲ ದೃಶ್ಯಗಳಿಗೂ ಎರಡನೇ ಟೇಕ್‌ನಲ್ಲೇ ಓಕೆ ಅನಿಸಿಕೊಂಡಿದ್ದಕ್ಕೆ ತಮನ್ನಾಳಿಗೆ ಎಲ್ಲಿಲ್ಲದ ಖುಷಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!