'ಮೊಹೆಂಜೊ ದಾರೊ' ಸಿನೆಮಾ ಭಿತ್ತಿಚಿತ್ರ 
ಸಿನಿಮಾ ಸುದ್ದಿ

'ಮೊಹೆಂಜೊ ದಾರೊ' ಚಿತ್ರೀಕರಣದ ವೇಳೆ ಜನ ತಲೆ ಸುತ್ತಿ ಬೀಳುತ್ತಿದ್ದಾರೆ: ಹೃತಿಕ್

ಮರಳಿನ ಸುಂಟರಗಾಳಿಯಲ್ಲಿ ಮಧ್ಯೆ ನಡೆಯುತ್ತಿರುವ 'ಮೊಹೆಂಜೊ ದಾರೊ' ಚಲನಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ

ಮುಂಬೈ: ಮರಳಿನ ಸುಂಟರಗಾಳಿಯಲ್ಲಿ ಮಧ್ಯೆ ನಡೆಯುತ್ತಿರುವ 'ಮೊಹೆಂಜೊ ದಾರೊ' ಚಲನಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ಹೃತಿಕ್ ರೋಶನ್ ತೀವ್ರ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೆ "ಸಿನೆಮಾ ಚಿತ್ರೀಕರಣ ಅದ್ಭುತವಾಗಿ ಮುಂದುವರೆಯುತ್ತಿದೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

"ಮರಳಿನ ಸುಂಟರಗಾಳಿಯ ನಡುವೆ ನಾವು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಚಿತ್ರೀಕರಣ ಮಾಡುವುದು ಕಷ್ಟದ ಕೆಲಸ. ಏನು ಹೇಳುವುದು... ಸೆಟ್ಟಿನಲ್ಲಿ ಜನ ತಲೆಸುತ್ತಿ ಬೀಳುತ್ತಿದ್ದಾರೆ. ಆದರೆ ಚಿತ್ರೀಕರಣ ಪ್ರಗತಿಯಲ್ಲಿದೆ" ಎಂದು ಹೃತಿಕ್ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

"ಸಿನೆಮಾ ಪ್ರಗತಿಯಲ್ಲಿದೆ. ಚಿತ್ರೀಕರಣ ಅದ್ಭುತವಾಗಿ ಮುಂದುವರೆಯುತ್ತಿದೆ" ಎನ್ನುತ್ತಾರೆ ಹೃತಿಕ್.

ಅಶುತೋಶ್ ಗೌರೀಕರ್ ನಿರ್ದೇಶನದ ಈ ಚಿತ್ರ ಸಿಂಧು ಕಣಿವೆ ನಾಗರಿಕತೆಯಲ್ಲಿ ನಡೆಯುವ ಒಂದು ಪ್ರೇಮ ದಂತಕಥೆ. ಭುಜ್ ಸುತ್ತಮುತ್ತ ಸಮಗ್ರ ಚಿತ್ರೀಕರಣ ನಡೆಯುತ್ತಿದೆ.

ಈ ಮಧ್ಯೆ ಒಂದು ಪ್ರಮುಖ ದೃಶ್ಯಕ್ಕೆ ಹೃತಿಕ್ ರೋಶನ್ ಬೆತ್ತಲೆಯಾಗಲಿದ್ದಾರೆ ಎಂಬ ವದಂತಿಗಳು ಸುತ್ತಾಡುತ್ತಿವೆ. ಈ ಬಗ್ಗೆ ಪ್ರಶ್ನಿಸಿದಾಗ "ನಾನು ಸಿನೆಮಾಗಳಲ್ಲಿ ಬೆತ್ತಲೆಯಾಗುವುದಿಲ್ಲ ಆದು ಬೇರೆಡೆ" ಎಂದು ಉತ್ತರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT