ಶ್ರುತಿ ಹಾಸನ್ 
ಸಿನಿಮಾ ಸುದ್ದಿ

ಬಹುಮುಖ ಪ್ರತಿಭೆ ಶ್ರುತಿ

ಶ್ರುತಿ, ಅಪ್ಪ ಕಮಲ್ ಹಾಸನ್‍ರಂತೆಯೇ ಬಹುಮುಖ ಪ್ರತಿಭೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ನೋಡಿದರೆ ಈಕೆ ಬೆಸ್ಟ್ ಡ್ಯಾನ್ಸರ್...

ಶ್ರುತಿ, ಅಪ್ಪ ಕಮಲ್ ಹಾಸನ್‍ರಂತೆಯೇ  ಬಹುಮುಖ ಪ್ರತಿಭೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ವಿಡಿಯೋ ನೋಡಿದರೆ ಈಕೆ ಬೆಸ್ಟ್ ಡ್ಯಾನ್ಸರ್ ಎಂಬುದರಲ್ಲಿ ಎರಡು ಮಾತಿಲ್ಲ.

ಈ ವಿಡಿಯೋ ಬಿಡುಗಡೆಯಾಗಿ ಬಹಳ ದಿನಗಳಾಗಿವೆ. ಆದರೆ ಈಗ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿರುವುದು ವಿಶೇಷ. `ಸೋಲು ಗೆಲುವಿನ ಬಗ್ಗೆ ಮಾತನಾಡುವುದು, ಅವುಗಳ ಬಗ್ಗೆ ಪದೇಪದೆ ಚರ್ಚಿಸುವುದು ನನಗೆ ಸುತಾರಾಂ ಇಷ್ಟವಿಲ್ಲ. ಫಲಿತಾಂಶ ಏನೇ ಇರಲಿ ಅದು ಮನಸ್ಸಿನಲ್ಲಿ ಸ್ವಲ್ಪ ಸಮಯವಷ್ಟೇ ಇರುವುದು ಒಳಿತು' ಎನ್ನುತ್ತಾರೆ ಶ್ರುತಿ.

`ನಾಲ್ಕು ಜನ ನಡೆಯುವ ಹಾದಿಯಲ್ಲಿ ನಾನೂ ಹೆಜ್ಜೆ ಹಾಕುವುದು ನನಗಿಷ್ಟವಿಲ್ಲ. ನನ್ನ ಈ ಗುಣವೇ ನನ್ನನ್ನು ವಿಶೇಷವಾಗಿ ನೋಡುವಂತೆ ಮಾಡಿದೆ. ಯಾವುದೇ ಸಿನಿಮಾದ ಸೋಲು ಗೆಲುವು ಇಡೀ ಚಿತ್ರತಂಡಕ್ಕೆ ಸಲ್ಲುತ್ತದೆ. ನಾನಂತೂ ಸಿನಿಮಾ ಒಂದರ ಗೆಲುವನ್ನು ಎಲ್ಲರಿಗೂ ಹಂಚುತ್ತೇನೆ. ಅದೇ ರೀತಿ ಸೋಲನ್ನೂ. ಹೆಚ್ಚಿನವರು ಹೊಸ ಪ್ರಯೋಗಕ್ಕೆ ಕೈಹಾಕುವುದಿಲ್ಲ. ಆದರೆ ನಾನು ಮಾತ್ರ ಹೊಸಹೊಸ ಪ್ರಯೋಗಗಳಿಗೆ ಸದಾ ಸಿದ್ಧ' ಎಂದು ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಶ್ರುತಿ ಹಾಸನ್‍ಗೆ ಆಲ್ ದಿ ಬೆಸ್ಟ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT