ಮಲಯಾಳಮ್ ನಟಿ ನೀತು ಕೃಷ್ಣ ವಾಸು
ಚೆನ್ನೈ: ಅಮೇರಿಕಾ ವೀಸಾ ಪಡೆಯಲು ಫೋರ್ಜರಿ ಮಾಡಿರುವ ಆರೋಪದ ಮೇಲೆ ಮಲಯಾಳಂ ನಟಿ ಮತ್ತು ಇನ್ನಿಬ್ಬರನ್ನು ನಗರದ ಪೊಲೀಸರು ಬಂಧಿದಿದ್ದಾರೆ.
ಈ ನಕಲಿಗೆ ಸಹಾಯ ಮಾಡಿದ ಚಲನಚಿತ್ರ ನಿರ್ಮಾಪಕ ಮತ್ತು ಇನ್ನೊಬ್ಬ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ ಪೊಲೀಸರು.
ಅಮೇರಿಕಾ ಕಾನ್ಸ್ಯುಲೇಟ್ ನಲ್ಲಿ ಮಲಯಾಳಮ್ ನಟಿ ನೀತು ಕೃಷ್ಣ ವಾಸು(೨೭) ಎಂಬುವವರು ವೀಸಾ ಸಂದರ್ಶನಕ್ಕಾಗಿ ಬಂದಿದ್ದರು. ಆದರೆ ಅವರು ಅಮೆರಿಕಾದಲ್ಲಿ ನಡೆಯುವ ಮದುವೆಯಲ್ಲಿ ಪ್ರದರ್ಶನ ನೀಡಲು ತಮಗೆ ಆಹ್ವಾನ ಇದೆ ಎಂದು ಸಲ್ಲಿಸ್ಸಿದ್ದ ಅರ್ಜಿಯ ಬಗ್ಗೆ ಅನುಮಾನತಳೆದ ವೀಸಾ ಅಧಿಕಾರಿಗಳು ನಟಿಯನ್ನು ಪ್ರಶ್ನಿಸಿದ್ದಾರೆ.
ನಂತರ ದಾಖಲೆಗಳನ್ನು ಪರೀಕ್ಷಿಸಿದ ಮೇಲೆ ಅವುಗಳು ನಕಲು ಎಂದು ತಿಳಿದುಬಂದಿದ್ದು, ನಟಿ ಮತ್ತು ಅವರ ಜೊತೆಗೆ ಬಂದಿದ್ದ ಜಸ್ಟಿನ್ ಥಾಮಸ್ (೩೫) ಹಾಗು ಪಿ ಸುಭಾಷ್ (೩೮) ಎಂಬುವವರನ್ನು ಕೂಡ ಕಾನ್ಸುಲೇಟ್ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ಆಂಧ್ರ ಪ್ರದೇಶದ ಚಿತ್ರ ನಿರ್ಮಾಪಕ ರಾಜು ಮತ್ತು ಕುಂಜುಮಾನ್ ಎನ್ನುವವರು ತಮ್ಮನ್ನು ಸಂಪರ್ಕಿಸಿ ಅಮೇರಿಕಾದ ಮದುವೆಯಲ್ಲಿ ನೃತ್ಯ ಪ್ರದರ್ಶನ ನೀಡಲು ಆಹ್ವಾನ ನೀಡಿದ್ದರು. ಆದುದರಿಂದ ವೀಸಾ ಪಡೆಯಲು ಈ ನಟಿ ರಾಜು ಎಂಬುವವನಿಗೆ ೨ ಲಕ್ಷ ರೂ ನೀಡಿ ಸಹಾಯ ಪಡೆದಿದ್ದರಂತೆ. ಈಗ ಈ ಇಬ್ಬರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಮೂವರನ್ನು ಬಂಧಿಸಿ ರಾಯಪೆಟ್ಟ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics