ಟಾಲಿವುಟ್ ನಟ ನಾಗಾರ್ಜುನ ತಮ್ಮ 56ನೇ ವರುಷದ ಬರ್ತ್‍ಡೇಯನ್ನು ಈ ಸಲ ಹೈದರಾಬಾದಿನಲ್ಲಿ ಆಚರಿಸಿಕೊಳ್ಳಲಿಲ್ಲ.
ಥಾಯ್ಲೆಂಡಿನ ಬೀಚ್ ರೆಸಾರ್ಟ್‍ಗೆ ಅವರ ಇಡೀ ಫ್ಯಾಮಿಲಿ ಶಿಫ್ಟಾಗಿತ್ತು. ಪತ್ನಿ ವಿಮಲಾ, ಮಕ್ಕಳಾದ ನಾಗಚೈತನ್ಯ ಮತ್ತು ಅಖಿಲ್, ತಂದೆಗೆ ವಿಶೇಷ ಗಿಫ್ಟ್ ಕೊಟ್ಟರಂತೆ. ಥಾಯ್ಲೆಂಡಿಗೆ ಹೋಗೋ ಮೊದಲು ಮಗ ಅಖಿಲ್‍ನ `ಅಖಿಲ್' ಚಿತ್ರದ ಟ್ರೈಲರ್ ಬಿಡುಗಡೆ ನಡೆಯಿತು.
ಇದು ಅವರ ಮಗನ ಮೊದಲ ಸಿನಿಮಾ. ನಾಗಾರ್ಜುನ ಸದ್ಯ `ಸೊಗ್ಗಡೆ ಚಿನ್ನಿ ನಯನಾ'ದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಬರ್ತ್‍ಡೇಗೆ ಫ್ಯಾಮಿಲಿ ರಿಕ್ವೆಸ್ಟ್ ಮೇರೆಗೆ ಥಾಯ್ಲೆಂಡಿಗೆ ಹೋದರಂತೆ.