ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಮತ್ತು ಆಕೆಯ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಹೊಸ ವರ್ಷಾಚರಣೆಯನ್ನು ಮತ್ತು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಬುಧಾಬಿಯ ಸ್ಥಳವೊಂದಕ್ಕೆ ಹೊರಟಿದ್ದರು. ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನದೊಳಗೆ ಕುಳಿತುಕೊಂಡ ತಕ್ಷಣ ವಿದ್ಯಾಬಾಲನ್ ಗೆ ಬೆನ್ನು ನೋವು ಕಾಣಿಸಿಕೊಂಡಿದೆ.ಜನವರಿ 1ರಂದು ವಿದ್ಯಾ ಹುಟ್ಟುಹಬ್ಬ.
ಕೂಡಲೇ ವಿಮಾನದಲ್ಲಿನ ಅರೆ ವೈದ್ಯಕೀಯ ಸಿಬಂದಿಯನ್ನು ಕರೆಸಿ ಪರೀಕ್ಷೆ ನಡೆಸಲಾಯಿತು. ಕಿಡ್ನಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದರು.ಕೂಡಲೇ ಅವರು ಪ್ರಯಾಣವನ್ನು ಮೊಟಕುಗೊಳಿಸಿ ಮುಂಬೈ ವಿಮಾನ ಹಿಡಿದು ಬಂದರು. ಇದೀಗ ಮುಂಬೈಯ ಖಾರ್‌ನಲ್ಲಿರುವ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾ ಅವರ ವಕ್ತಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು,"ಈಗ ವಿದ್ಯಾರವರು ಚೇತರಿಸಿಕೊಂಡಿದ್ದು ಪರಿಣತ ವೈದ್ಯರಿಂದ ಶುಶ್ರೂಷೆ ಪಡೆಯುತ್ತಿದ್ದಾರೆ, ಶೀಘ್ರವೇ ಗುಣಮುಖ ಹೊಂದುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.