ಬೆಂಗಳೂರು: ಬಾಲಿವುಡ್ ನಟ ಶಾರುಕ್ ಖಾನ್ ಜೊತೆ ಹೆಜ್ಜೆ ಹಾಕಿರುವ ಅಜಿಷಾ ಷಾ ಕನ್ನಡ ಚಿತ್ರ ವಾಸ್ಕೋಡಗಾಮದಲ್ಲೂ ಕುಣಿದು ಕುಪ್ಪಳಿಸಿ ಸಂತಸಗೊಂಡಿದ್ದಾರೆ. ನಟ ಕಿಶೋರ್ ಜೊತೆ ಸಿನೆಮಾದಲ್ಲಿ ಐಟಮ್ ಹಾಡೊಂದಕ್ಕೆ ಷಾ ನೃತ್ಯ ಮಾಡಿದ್ದಾರೆ.
ಕನ್ನಡ ಮೇಷ್ಟ್ರು ಪಾತ್ರ ವಹಿಸಿರುವ ಕಿಶೋರ್ ಕೂಡ ಈ ಐಟಮ್ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಇದು ಸಿನೆಮಾದ ಕಥೆಗೆ ಪೂರಕವಾಗಿತ್ತು ಎಂದು ವಿವರಿಸುವ ನಿರ್ದೇಶಕ ಮಧುಚಂದ್ರ "ಕನ್ನಡ ಅಧ್ಯಾಪಕ ವಿದ್ಯಾರ್ಥಿಗಳ ಜೊತೆಗಳಲ್ಲಿ ಸೋಲುತ್ತಾರೆ. ಸ್ಪರ್ಧೆಯಲ್ಲಿ ಮತ್ತೆ ಭಾಗವಹಿಸಲು ಒಂದು ವಿಶೇಷ ನೃತ್ಯ ಮಾಡುತ್ತಾರೆ, ಆವಾಗಲೇ ಅಜಿಷಾ ಸಿನೆಮಾದಲ್ಲಿ ಕಾಣಿಸಿಕೊಳ್ಳುವುದು" ಎನ್ನುತ್ತಾರೆ.
ಈ ಹಾಡನ್ನು ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆಯಂತೆ. ಈ ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.