ದುನಿಯಾ ವಿಜಯ್ 
ಸಿನಿಮಾ ಸುದ್ದಿ

ದುನಿಯಾ ವಿಜಯ್ ಅಲಿಯಾಸ್ 'ಮುರುಗ'!

ಯೋಗರಾಜ್ ಭಟ್ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತೊಂದು ಸಿನಿ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ.

ಯೋಗರಾಜ್ ಭಟ್ ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತೊಂದು ಸಿನಿ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ.

ವಿಜಯ್ ನಾಯಕ ನಟನಾಗಿದ್ದ 'ಶಿವಾಜಿನಗರ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಪಿ.ಏನ್ ಸತ್ಯ ಅವರೇ ವಿಜಯ್ ಅವರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲಿದ್ದು ಈ ಚಿತ್ರಕ್ಕೆ ಮುರುಗ ಎಂದು ನಾಮಕರಣ ಮಾಡಲಾಗಿದೆ. 'ಶಿವಾಜಿನಗರ'ಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡ ಮುರುಗ ಚಿತ್ರಕ್ಕೂ ಕೆಲಸ ಮಾಡಲಿದೆ.

ಯೋಗರಾಜ್ ಭಟ್ರ ನಿರ್ದೇಶನದ ಚಿತ್ರದ ಜೊತೆಜೊತೆಗೇ ಮುರುಗ ಚಿತ್ರ ಚಿತ್ರೀಕರಣವೂ ನಡೆಯಲಿದೆ ಎಂದಿರುವ ದುನಿಯಾ ವಿಜಯ್, ಮುರುಗ ಚಿತ್ರವನ್ನು ಎಲ್ಲಾ ವರ್ಗದವರಿಗೂ ಇಷ್ಟವಾಗುವಂತೆ ಹೊರತರಲಾಗುವುದು ಎಂದು ಹೇಳಿದ್ದಾರೆ. ಯೋಗರಾಜ್ ಭಟ್ರು ಸಿನಿಮಾ ಚಿತ್ರಕಥೆಯಲ್ಲಿ ಬ್ಯುಸಿಯಾಗಿರುವುದರಿಂದ ಅವರೇ ತಮ್ಮ ನೂತನ ಚಿತ್ರದ ಬಗ್ಗೆ ಘೋಷಣೆ ಮಾಡುವವರೆಗೂ ಕಾಯುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ. ಭಟ್ಟರೊಂದಿಗೆ ಸಿನಿಮಾ ಮಾಡುವುದಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದೆ, ಆ ಅವಕಾಶ ಈಗ ಬಂದಿದ್ದು ಚಿತ್ರೀಕರಣ ಪ್ರಾರಂಭದ ಬಗ್ಗೆ ಯೋಗರಾಜ ಭಟ್ರೇ ಮಾಹಿತಿ ನೀಡಬೇಕು ಎಂದಿದ್ದಾರೆ.

ಆರ್. ಎಕ್ಸ್ ಸೂರಿ ಬಿಡುಗಡೆಯಾಗಲಿರುವ ತಮ್ಮ ಮುಂದಿನ ಚಿತ್ರವಾಗಿದ್ದು, ಪ್ರೇಕ್ಷಕರಲ್ಲಿ ಸಿನಿಮಾವನ್ನು ನೋಡುವ ವಿಧಾನ  ಬದಲಾಗುತ್ತಿದೆ ಎಂದು ದುನಿಯಾ ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ದುನಿಯಾ ರೀತಿಯ ಮತ್ತೊಂದು ಪಾತ್ರವನ್ನು ನಿರ್ವಹಿಸುವುದು ಕಷ್ಟ. ದುನಿಯಾ ಪಾತ್ರ ತಮಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಆ ಪಾತ್ರದ ಮರುಸೃಷ್ಟಿಯಲ್ಲಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳಲು ಇಷ್ಟಪಡುವುದುಇಲ್ಲ ಎಂದು ವಿಜಯ್ ತಿಳಿಸಿದ್ದಾರೆ.

  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT