ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಮುಂದಿನ ಮುಖ್ಯಮಂತ್ರಿಯಾಗಲಿದ್ದಾಳಂತೆ ನಟಿ ರಾಗಿಣಿ!

ನಟಿ ರಾಗಿಣಿ ದ್ವಿವೇದಿ ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಹೇಳ್ತಿದ್ದಾಳಂತೆ. ಇದೇನಪ್ಪ ಚಿತ್ರರಂಗ ಬಿಟ್ಟು ರಾಗಿಣಿ ರಾಜಕೀಯಕ್ಕೆ .....

ನಟಿ ರಾಗಿಣಿ ದ್ವಿವೇದಿ ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಹೇಳ್ತಿದ್ದಾಳಂತೆ. ಇದೇನಪ್ಪ ಚಿತ್ರರಂಗ ಬಿಟ್ಟು ರಾಗಿಣಿ ರಾಜಕೀಯಕ್ಕೆ ಯಾವಾಗ ಎಂಟ್ರಿ ಕೊಟ್ರು ಅಂತಾ ತಲೆ ಕೆಡಿಸಿಕೊಳ್ಳಬೇಡಿ.
ರಾಗಿಣಿನಾನೇ ನೆಕ್ಸ್ಟ್ ಸಿಎಂ ಎಂಬ ಟೈಟಲ್ ನಲ್ಲಿ ಬರುತ್ತಿರುವ ಚಿತ್ರದಲ್ಲಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾಳೆ. ಮುಸ್ಸಂಜೆ ಮಾತು ಚಿತ್ರದ ನಿರ್ದೇಶಕ ಮಹೇಶ್ ನಾನೇ ನೆಕ್ಸ್ಟ್ ಸಿಎಂ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದ ಶೀರ್ಷಿಕೆ ನಾನೇ ಎಂಬುದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯ ನಾನು, ನನ್ನದು, ನನಗೆ ಎಂಬ ಬಗ್ಗೆಯೇ ಯೋಚಿಸುತ್ತಾನೆ. ಇಲ್ಲಿ ಅಧಿಕಾರವನ್ನು ಎಲ್ಲರು ಬಯಸುತ್ತಾರೆ.
ಅಧಿಕಾರ ಎಂಬುದು ಸಿಕ್ಕಾಗ ಪ್ರತಿಯೊಬ್ಬ ಸಾಮಾನ್ಯಮನುಷ್ಯ ಕೂಡ ಡಿಫರೆಂಟ್ ಆಗಿ ಬದಲಾಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗುತ್ತಂತೆ.

ಹಿಂದಿಯ ನಾಯಕ್ ನನ್ನ ನೆಚ್ಚಿನ ಚಿತ್ರ. ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲಿ ಒಂದು ದಿನವಾದರೂ ನಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆ ರಾಗಿಣಿಗೆ ಇದೆಯಂತೆ.
ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಪಿಎಸ್ ಪ್ರೊಡಕ್ಸನ್ ಅಡಿಯಲ್ಲಿ ನಾನೇ ಚಿತ್ರ ನಿರ್ಮಾಣವಾಗುತ್ತಿದೆ.

ಇದುವರೆಗೂ ರಾಗಿಣಿ ಹಲವು ಚಿತ್ರಗಳಲ್ಲಿ ನಟಿಸಿ ಕಮರ್ಷಿಯಲ್ ಹಿರೋಯಿನ್ ಎಂಬ ಹೆಸರು ಗಳಿಸಿದ್ದಾರೆ.  ಒಬ್ಬ ಸಾಮಾನ್ಯ ಮಹಿಳೆ ಮುಖ್ಯಮಂತ್ರಿಯಾಗಿ ಹೇಗೆ ಕೆಲಸ ನಿರ್ವಹಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT