'ನೀರ್ ದೋಸೆ' ಚಲನಚಿತ್ರದಲ್ಲಿ ಮರ್ಲಿನ್ ಮನ್ರೋ ಅನುಕರಿಸಿದ ಹರಿಪ್ರಿಯ 
ಸಿನಿಮಾ ಸುದ್ದಿ

ಮರ್ಲಿನ್ ಮನ್ರೋ ಅನುಕರಿಸಿದ ಹರಿಪ್ರಿಯ

ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಲನಚಿತ್ರದಲ್ಲಿ ಹರಿಪ್ರಿಯ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಸಿನೆಮಾ 'ಸೆವೆನ್ ಇಯರ್ ಇಚ್'...

ಬೆಂಗಳೂರು: ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಲನಚಿತ್ರದಲ್ಲಿ ಹರಿಪ್ರಿಯ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಸಿನೆಮಾ 'ಸೆವೆನ್ ಇಯರ್ ಇಚ್' ನಲ್ಲಿ ಖ್ಯಾತ ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಧರಿಸಿದ್ದ ಉಡುಪನ್ನು ಅನುಕರಿಸುವ ಮೂಲಕ ಗಾಂಧಿನಗರದ ಗಮನ ಸೆಳೆದಿದ್ದಾರೆ,

"ನಾನು ಬೋಲ್ಡ್ ಪಾರ್ತಕ್ಕೆ ಒಗ್ಗಿಸಿಕೊಳ್ಳಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧನಾಗಿದ್ದೆ. ಪಶ್ಚಿಮದ ಬಟ್ಟೆಗಳನ್ನು ತೊಡುವುದು ನನಗೆ ಗೊತ್ತು ಆದರೂ ಈ ಪಾತ್ರವನ್ನು ಅಭಿನಯಿಸುವಾಗ, ಪಕ್ಕದ ಮನೆ ಹುಡುಗಿಯ ಪಾತ್ರದ ಪರಿಕಲ್ಪನೆಯನ್ನು ತೊರೆಯಬೇಕಾಯಿತು" ಎಂದು ವೇಶ್ಯೆಯ ಪಾತ್ರ ಮಾಡುತ್ತಿರುವ ಹರಿಪ್ರಿಯಾ ಹೇಳುತ್ತಾರೆ.

ತೆಲುಗಿನ 'ಅಬ್ಬಾಯಿ ಕ್ಲಾಸ್ ಅಮ್ಮಾಯಿ ಮಾಸ್' ಸಿನೆಮಾದಲ್ಲಿ ಇಂತಹ ಪಾತ್ರವನ್ನು ಅಭಿನಯಿಸಿ ಅನುಭವವಿರುವ ಹರಿಪ್ರಿಯಾಗೆ "ಕಾಲ್ ಗರ್ಲ್ ಪಾತ್ರಕ್ಕೆ ಇನ್ನು ಹೆಚ್ಚು ಭಾವನೆ ತುಂಬಲು ನಾನು ಧೂಮಪಾನ ಮಾಡಬೇಕಾಯಿತು. ಇದು ನನಗೆ ಅಭ್ಯಾಸವಿಲ್ಲದಿದ್ದರಿಂದ ಕಷ್ಟವಾಯಿತು. ಸಿಗರೆಟ್ ಸೇದುವವರಿಂದ ಸಲಹೆಗಳನ್ನು ಪಡೆಯಬೇಕಾಗಿ ಬಂತು ಎಂದು ತಿಳಿಸುತ್ತಾರೆ" ಹರಿಪ್ರಿಯ.

ಈಗಾಗಲೇ ೪೦% ಚಿತ್ರೀಕರಣ ಮುಗಿಸಿರುವ ವಿಜಯ್ ಪ್ರಸಾದ್ "ನಾಳೆ ದತ್ತಣ್ಣನವರ ಜೊತೆ ಚಿತ್ರೀಕರಣ ಪ್ರಾರಂಭವಾಗುತ್ತದೆ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ"ಎನ್ನುತ್ತಾರೆ.

ಮುಂದಿನ ವರ್ಷ ಸಂಕ್ರಾಂತಿಗೆ ಸಿನೆಮಾ ಬಿಡುಗಡೆ ಮಾಡಲು ಚಿತ್ರತಂಡ ಎದುರುನೋಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ