'ಉತ್ತಮ ವಿಲನ್' ಚಿತ್ರಕ್ಕೆ ಒಲಿದ ಅಂತಾರಾಷ್ಟ್ರೀಯ ಪ್ರಶಸ್ತಿ
ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ನಿರ್ದೇಶದ ಉತ್ತಮ ವಿಲನ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ...
ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ನಿರ್ದೇಶದ ಉತ್ತಮ ವಿಲನ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಲಾಸ್ ಏಂಜಲೀಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನ ಡಿಫ್ರೆಂಟ್ ಕೆಟಗರಿ ಚಿತ್ರ ವಿಭಾಗದಲ್ಲಿ ಬಹುಭಾಷಾ ಕಲಾವಿದ ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರಕ್ಕೆ ಹಲವು ಪ್ರಶಸ್ತಿ ಸಿಕ್ಕಿದೆ.
ಉತ್ತಮ ನಟ- ಕಮಲ್ ಹಾಸನ್, ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ ಮತ್ತು ಗೀತೆ ರಚನೆ- ಗಿಬ್ರಾನ್, ಉತ್ತಮ ಸೌಂಡ್ ಡಿಸೈನ್ -ಕುನಾಲ್ ರಾಜನ್ ವಿಭಾಗದಲ್ಲಿ ಉತ್ತಮ ವಿಲನ್ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.
ರಷ್ಯನ್ ಫಿಲಂ ಫೆಸ್ಟಿವಲ್ ನಲ್ಲೂ ಈ ಚಿತ್ರ ಉತ್ತಮ ಸಾಧನೆ ಮಾಡಿತ್ತು.