ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

ಸೈಕೋ ಥ್ರಿಲ್ಲರ್ ಸಿನಿಮಾದಲ್ಲಿ ರಾಗಿಣಿ

ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಮತ್ತೊಂದು ಅಂತಹುದೇ ಪಾತ್ರಗಳಲ್ಲಿ...

ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಮತ್ತೊಂದು ಅಂತಹುದೇ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ರಾಗಿಣಿ ಅಭಿನಯಿಸುತ್ತಿರುವ ರಣಚಂಡಿ, ಅಮ್ಮ, ರಾಗಿಣಿ ಸೂಪರ್ ಸ್ಟಾರ್ ಮತ್ತು ಲೇಡಿ ಸಿಂಗಂ ಚಿತ್ರಗಳು ಈಗಾಗಲೇ ಶೂಟಿಂಗ್ ಹಂತದಲ್ಲಿವೆ. ಈಗ ಮತ್ತೊಂದು ಅಂತಹದ್ದೇ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅದು ಹುಲಿ ದೇವರ ಕಾಡು. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ನವ ನಿರ್ದೇಶಕ ಜಿತೇಂದ್ರ ಜೋ ಸೈಮನ್. ಈ ಪಾತ್ರಕ್ಕೆ ರಾಗಿಣಿಯವರು ಮಾತ್ರ ನ್ಯಾಯ ಒದಗಿಸಬಹುದು ಎಂಬ ನಂಬಿಕೆ ನನ್ನದು.ಹಾಗಾಗಿ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದೊಂದು ಸೈಕೋ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಅವರ ನಟನೆಗೆ ತುಂಬಾ ಅವಕಾಶಗಳಿವೆ. ಇಡೀ ಸಿನಿಮಾ ರಾಗಿಣಿ ಅವರ ಸುತ್ತ ಸುತ್ತುತ್ತದೆ. ಉಳಿದೆಲ್ಲಾ ಪಾತ್ರಗಳು ಸುಮ್ಮನೆ ಬಂದು ಹೋಗುತ್ತವೆ ಎನ್ನುತ್ತಾರೆ. ಚಿತ್ರದ ಉಳಿದ ಪಾತ್ರಕ್ಕಾಗಿ ಅವರು ರಾಕ್ ಲೈನ್ ವೆಂಕಟೇಶ್, ರಮೇಶ್ ಭಟ್, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದ್ದಾರಂತೆ.

ಇದು ಜಿತೇಂದ್ರ ಅವರ ನಿರ್ದೇಶನದ ಮೊದಲ ಸಿನಿಮಾವಾದರೂ ಕೂಡ ತಂದೆ ಜೋ ಸೈಮನ್ ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿರುವ ಅನುಭವವಿದೆ. ಜೋ ಸೈಮನ್ ಆಕ್ಷನ್ ಪ್ರಧಾನ ಚಿತ್ರಗಳ ನಿರ್ದೇಶನಕ್ಕೆ ಹೆಸರಾದವರು. ಚಿತ್ರೋದ್ಯಮಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ನಿರ್ದೇಶಕರು ಕೂಡ ವಿಭಿನ್ನ ಬಗೆಯ ಸಿನಿಮಾ ನಿರ್ದೇಶನ ಮಾಡಲು ಆಸೆ ಪಡುತ್ತಾರೆ. ಅದರಂತೆ ನಾನು ಮಾನಸಿಕವಾಗಿ ಥ್ರಿಲ್ಲರ್ ಕೊಡುವ ಸಿನಿಮಾಗಳನ್ನು ನಿರ್ದೇಶಿಸುತ್ತೇನೆ. ಇದೊಂದು ಪೂರ್ವ ಯೋಜಿತ ಸಿನಿಮಾ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರನ್ನು ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ತಂದೆಯವರು ಕೂಡ ಖುಷಿಪಟ್ಟಿದ್ದಾರೆ ಎಂದು ಹೇಳುತ್ತಾರೆ ಜಿತೇಂದ್ರ.

ಇನ್ನೊಂದು ಆಸಕ್ತಿಕರ ವಿಷಯವೆಂದರೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಹಾಸನ ಮೂಲದ ಅಂಕಿತ ಗೌಡ. ಅವರು ಚಿತ್ರೋದ್ಯಮದ ಬಗ್ಗೆ ಸಂಪೂರ್ಣ ತಿಳಿದುಕೊಂಡು ನಂತರ ನಟಿಸಲು ಇಚ್ಚಿಸುತ್ತಿದ್ದಾರಂತೆ.

ಚಿತ್ರದ ಹಾಡಿನ ರೆಕಾರ್ಡಿಂಗ್ ಕೆಲಸ ಇಂದು ಆರಂಭವಾಗುತ್ತಿದ್ದು, ಹುಲಿ ದೇವರ ಹಾಡು ಚಿತ್ರ ಜನವರಿ 6ಕ್ಕೆ ಬಿಡುಗಡೆಯಾಗಲಿದೆಯಂತೆ. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನಲ್ಲಿರುವ ಒಂದು ಸ್ಥಳದ ಹೆಸರು ಹುಲಿ ದೇವರ ಕಾಡು ಆಗಿದ್ದು, ಕಾಡಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ ಎಂದು ಜಿತೇಂದ್ರ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 ಕಾಮನ್ವೆಲ್ತ್ ಕ್ರೀಡಾಕೂಟ ಅಹಮದಾಬಾದ್‌ನಲ್ಲಿ ಆಯೋಜಿಸಲು ಶಿಫಾರಸು; ನವೆಂಬರ್ 26 ರಂದು ಅಂತಿಮ ನಿರ್ಧಾರ

ಕೆಮ್ಮಿನ ಸಿರಪ್ ದುರಂತ: ಮಧ್ಯಪ್ರದೇಶದಲ್ಲಿ 3 ವರ್ಷದ ಬಾಲಕಿ ಸಾವು, ಮಕ್ಕಳ ಸಾವಿನ ಸಂಖ್ಯೆ 24ಕ್ಕೆ ಏರಿಕೆ!

ಗಡಿಯಲ್ಲಿ ಮತ್ತೆ ಉದ್ವಿಗ್ನತೆ: ಅಫ್ಘಾನಿಸ್ತಾನದೊಂದಿಗೆ 48 ಗಂಟೆಗಳ ಕದನ ವಿರಾಮಕ್ಕೆ ಪಾಕಿಸ್ತಾನ ಒಪ್ಪಿಗೆ!

ಬೆಂಗಳೂರಿಗರಿಗೆ ಗುಡ್​​ನ್ಯೂಸ್: ನವೆಂಬರ್ 1 ರಿಂದ A ಖಾತಾ ಅಭಿಯಾನ; ಆನ್‌ಲೈನ್ ವ್ಯವಸ್ಥೆಗೆ DCM ಚಾಲನೆ

"ಎಲ್ಲದಕ್ಕೂ ಒಂದು ಮಿತಿ ಇದೆ": ಕಿರಣ್ ಮಜುಂದಾರ್ ಷಾ ವಿರುದ್ಧ DCM ಡಿ.ಕೆ ಶಿವಕುಮಾರ್ ಕಿಡಿ

SCROLL FOR NEXT