ಹಾಸ್ಯ ನಟ ಚಿಕ್ಕಣ್ಣ 
ಸಿನಿಮಾ ಸುದ್ದಿ

ಹೀರೊ ಆಗಿ ನಟಿಸಲು ಬೇಕಾದಷ್ಟು ಸಮಯವಿದೆ: ಚಿಕ್ಕಣ್ಣ

ಇತ್ತೀಚಿಗೆ ಕನ್ನಡದ ಬಹುತೇಕ ಚಿತ್ರಗಳಲ್ಲಿ ಚಿಕ್ಕಣ್ಣ ಹಾಸ್ಯ ನಟನಾಗಿ ಕಾಣಿಸಿಕೊಳ್ಳುವುದು ವಾಡಿಕೆಯಾಗಿದೆ. ಈಗ 'ಬಿಲ್ ಗೇಟ್ಸ್' ಸಿನೆಮಾದಲ್ಲಿ ಹಾಸ್ಯ ನಟ ಪೂರ್ಣ ಪ್ರಮಾಣದ ಸ್ವತಂತ್ರ ಹೀರೊ ಆಗಿ

ಬೆಂಗಳೂರು: ಇತ್ತೀಚಿಗೆ ಕನ್ನಡದ ಬಹುತೇಕ ಚಿತ್ರಗಳಲ್ಲಿ ಚಿಕ್ಕಣ್ಣ ಹಾಸ್ಯ ನಟನಾಗಿ ಕಾಣಿಸಿಕೊಳ್ಳುವುದು ವಾಡಿಕೆಯಾಗಿದೆ. ಈಗ 'ಬಿಲ್ ಗೇಟ್ಸ್' ಸಿನೆಮಾದಲ್ಲಿ ಹಾಸ್ಯ ನಟ ಪೂರ್ಣ ಪ್ರಮಾಣದ ಸ್ವತಂತ್ರ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ವರದಿಯನ್ನು ತಾವು ಓದಿರುವುದಾಗಿ ಹೇಳುವ ಚಿಕ್ಕಣ್ಣ "ಅದು ನಿಜವಲ್ಲ. ಶ್ರೀನಿವಾಸ್ ನಿರ್ದೇಶನದ 'ಬಿಲ್ ಗೇಟ್ಸ್' ಸಿನೆಮಾದಲ್ಲಿ ನನಗೆ ಪಾತ್ರವಿರುವದು ನಿಜ ಆದರೆ ನಾನು ಹೀರೊ ಅಲ್ಲ. ಧಾರಾವಾಹಿ ನಟ ಶಿಶಿರ್ ಶಾಸ್ತ್ರಿ ಈ ಸಿನೆಮಾದ ಹೀರೊ. ನಾನು ಅವನ ಗೆಳೆಯನ ಪಾತ್ರದಲ್ಲಿ ನಟಿಸಿದ್ದೇನೆ" ಎಂದು ಸ್ಪಷ್ಟೀಕರಿಸುತ್ತಾರೆ.
ಹಾಸ್ಯ ನಟರಾಗಿದ್ದು ನಾಯಕನಟರಾದ ಶರಣ್ ಮತ್ತು ಕೋಮಲ್ ಅವರನ್ನು ಅನುಕರಿಸಿ ಹೀರೊ ಆಗುವ ಇಚ್ಛೆಯಿದೆಯೇ ಎಂಬ ಪ್ರಶ್ನೆಗೆ "ನನಗಾಗಲೇ ಹೀರೊ ಆಗಿ ನಟಿಸುವ ಅವಕಾಶಗಳು ಬಂದಿವೆ. ಆದರೆ ಅವಕ್ಕಿನ್ನು ನಾನು ಸಿದ್ಧನಿಲ್ಲ. ಅದಕ್ಕೆ ಬೇಕಾದಷ್ಟು ಸಮಯವಿದೆ" ಎನ್ನುತ್ತಾರೆ. 
ಹಲವಾರು ಸಿನೆಮಾಗಳಲ್ಲಿ ನಿರತರಾಗಿರುವ ಚಿಕ್ಕಣ್ಣ ಸದ್ಯಕ್ಕೆ ಅವರ ಮುಂದಿನ ಚಿತ್ರ 'ಚೌಕ'ದ ಡಬ್ಬಿಂಗ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್