ಶಿವರಾಜ್ ಕುಮಾರ್, ಯೋಗಿ 
ಸಿನಿಮಾ ಸುದ್ದಿ

ಶಿವಣ್ಣನ ಲೀಡರ್ ಅಖಾಡಕ್ಕೆ ಲೂಸ್ ಮಾದ ಯೋಗಿ ಎಂಟ್ರಿ

ಶಿವರಾಜ್ ಕುಮಾರ್ ನಟನೆಯ ಲೀಡರ್ ಚಿತ್ರ ಇದೇ ಆಗಸ್ಟ್ 18ಕ್ಕೆ ಮುಹೂರ್ತ ನಡೆಯಲಿದ್ದು. ಚಿತ್ರದ ತಯಾರಿ ಬರದಿಂದ ಸಾಗಿದೆ. ಈ ಮಧ್ಯೆ ಲೂಸ್ ಮಾದ ಯೋಗಿ...

ಶಿವರಾಜ್ ಕುಮಾರ್ ನಟನೆಯ ಲೀಡರ್ ಚಿತ್ರ ಇದೇ ಆಗಸ್ಟ್ 18ಕ್ಕೆ ಮುಹೂರ್ತ ನಡೆಯಲಿದ್ದು. ಚಿತ್ರದ ತಯಾರಿ ಬರದಿಂದ ಸಾಗಿದೆ. ಈ ಮಧ್ಯೆ ಲೂಸ್ ಮಾದ ಯೋಗಿ ಲೀಡರ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಲೀಡರ್ ಚಿತ್ರದಲ್ಲಿ ಬಿಗ್ ಸ್ಟಾರ್ ಗಳು ನಟಿಸುತ್ತಿರುವುದು ತಿಳಿದ ವಿಚಾರವೆ. ನಟ ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆ ದಂಪತಿಯ ಪುತ್ರಿ ಪರಿಣಿತ ಶಿವಣ್ಣನ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಜಯ್ ರಾಘವೇಂದ್ರ, ಜಗ್ಗೇಶ್ ಪುತ್ರ ಗುರು ನಟಿಸುತ್ತಿದ್ದು, ಪ್ರಣೀತ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹುಡುಗರು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಸಾಥ್ ನೀಡಿದ್ದರು. ಇದೀಗ ಶಿವಣ್ಣನ ಲೀಡರ್ ಚಿತ್ರಕ್ಕೆ ಕಿಟ್ಟಿ ಮಗಳು ಪರಿಣಿತ ಮತ್ತು ಲೂಸ್ ಮಾದ ಯೋಗಿ ಸಾಥ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಯೋಗಿ ಓರ್ವ ಮುಸ್ಲಿಂ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶಿವಣ್ಣ ಜತೆ ನಟಿಸಲು ಅವಕಾಶ ಸಿಕ್ಕಿರುವುದು ನಿಜಕ್ಕೂ ಅದೃಷ್ಠ ವಿಚಾರ. ದೊಡ್ಡ ಸ್ಟಾರ್ ನಟನ ವಿರುದ್ಧ ನಟಿಸುತ್ತಿರುವುದು ಚಾಲೆಂಜಿಂಗ್ ಕೆಲಸ ಎಂದು ಯೋಗಿ ಹೇಳಿದ್ದಾರೆ.

ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಛನದಲ್ಲಿ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸುತ್ತಿರುವ ಲೀಡರ್ ಚಿತ್ರವನ್ನು ರೋಸ್ ಚಿತ್ರ ಖ್ಯಾತಿಯ ಸಹನಾ ಮೂರ್ತಿ ನಿರ್ದೇಶಿಸುತ್ತಿದ್ದಾರೆ.

ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನಿರ್ದೇಶಿಸುತ್ತಿದ್ದು ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್