ಖ್ಯಾತ ದಕ್ಷಿಣ ಭಾರತ ನಟಿ ಶೋಭನಾ 
ಸಿನಿಮಾ ಸುದ್ದಿ

ಸಿನೆಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಆತುರ ಇಲ್ಲ: ನಟಿ ಶೋಭನಾ

ಸಿನೆಮಾಗಳಲ್ಲಿ ನಟಿಸುವುದು ಈಗ ಸದ್ಯದ ಆದ್ಯತೆಯಲ್ಲ ಬದಲಾಗಿ ಇತರ ಸೃಜನಶೀಲ ಕೆಲಸಗಳಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡಿರುವುದಾಗಿ ಖ್ಯಾತ ದಕ್ಷಿಣ ಭಾರತ ನಟಿ ಶೋಭನಾ ಹೇಳಿದ್ದಾರೆ.

ತಿರುವನಂತಪುರಂ: ಸಿನೆಮಾಗಳಲ್ಲಿ ನಟಿಸುವುದು ಈಗ ಸದ್ಯದ ಆದ್ಯತೆಯಲ್ಲ ಬದಲಾಗಿ ಇತರ ಸೃಜನಶೀಲ ಕೆಲಸಗಳಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡಿರುವುದಾಗಿ ಖ್ಯಾತ ದಕ್ಷಿಣ ಭಾರತ ನಟಿ ಶೋಭನಾ ಹೇಳಿದ್ದಾರೆ. 
ತಾವು ಪ್ರಚಾರ ರಾಯಭಾರಿಯಾಗಿರುವ ಉತ್ಪನ್ನವೊಂದರ ಬಿಡುಗಡೆಗಾಗಿ ನಟಿ ಸೋಮವಾರ ದೆಹಲಿಯಲ್ಲಿದ್ದರು. ತಾವು ನೃತ್ಯ ಮತ್ತು ಚೆನ್ನೈನ ನೃತ್ಯ ಶಾಲೆಯಲ್ಲಿ ಕಾರ್ಯನಿರತರಾಗಿರುವುದಾಗಿ ಶೋಭನಾ ಹೇಳಿದ್ದಾರೆ. 
"ಈ ದಿನಗಳಲ್ಲಿ ಸಮಯ ಸಿಗುವುದೇ ತೊಂದರೆ. ನಾನು ಸ್ಕ್ರಿಪ್ಟ್ ಬರೆಯುವುದರಲ್ಲಿ, ಮತ್ತು ನನ್ನದೇ ನೃತ್ಯ ನಿರ್ದೇಶನದಲ್ಲಿ ನಿರತಳಾಗಿದ್ದೇನೆ. ಸಿನೆಮಾ ಮಾಡುವುದಷ್ಟೇ ಸೃಜನಶೀಲತೆಯಲ್ಲ. ಇತರ ಪ್ರಾಕಾರಗಳಲ್ಲೂ ಸೃಜನಶೀಲತೆಯನ್ನು ಪ್ರದರ್ಶಿಸಬಹದು ಸದ್ಯಕ್ಕೆ ನಾನದರಲ್ಲಿ ನಿರತಳಾಗಿದ್ದೇನೆ" ಎಂದು 46 ವರ್ಷದ ನಟಿ ಹೇಳಿದ್ದಾರೆ. 
"ಜನ ಸ್ಕ್ರಿಪ್ಟ್ ಹಿಡಿದು ನನ್ನ ಬಳಿ ಬರುತ್ತಾರೆ. ಆದರೆ ಸಿನೆಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಆತುರವಿಲ್ಲ. ಆದರೆ ಈ ವರ್ಷ ಒಂದು ಮಲಯಾಳಂ ಸಿನೆಮಾದಲ್ಲಿ ನಟಿಸುವ ಸಾಧ್ಯತೆಯಿದೆ" ಎಂದು 2 ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತೆ, 200 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಶೋಭನಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT