ಸಿನಿಮಾ ಸುದ್ದಿ

ಕತ್ರಿನಾಗೆ ಒಂದು ಟ್ರಕ್ ಗುಲಾಬಿ ಗಿಫ್ಟ್ ನೀಡಿದ ನಟ ಆದಿತ್ಯ ರಾಯ್!

Srinivas Rao BV

ಜೈಪುರ: ನಟ ಆದಿತ್ಯ ರಾಯ್  ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಬರೋಬ್ಬರಿ ಒಂದು ಟ್ರಕ್ ಗುಲಾಬಿಯನ್ನು ಉಡುಗೊರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಗುಲಾಬಿ ದಿನಾಚರಣೆ ಹಿನ್ನೆಲೆಯಲ್ಲಿ ಆದಿತ್ಯ ರಾಯ್  ನಟಿ ಕತ್ರಿನಾ ಕೈಫ್ ಗೆ ಟ್ರಕ್ ಭರ್ತಿ ಗುಲಾಬಿಯನ್ನು ಗಿಫ್ಟ್ ಮಾಡಿದ್ದಾರೆ. ವಾಲಂಟೈನ್ಸ್ ಡೇ ಗೆ ಒಂದು ವಾರ ಮುಂಚಿತವಾಗಿ ಅಂತಾರಾಷ್ಟ್ರೀಯ ಗುಲಾಬಿ ದಿನ ಆಚರಿಸಲಾಗುತ್ತದೆ. 
ಆದಿತ್ಯ ರಾಯ್ ಗೆ ಕತ್ರಿನಾಗೆ ಟ್ರಕ್ ಭರ್ತಿ ಗುಲಾಬಿಯನ್ನು ಗಿಫ್ಟ್ ಮಾಡುವ ಆಲೋಚನೆ ಕೆಲವೇ ದಿನಗಳ ಹಿಂದೆ ಹೊಳೆದ ಆಲೋಚನೆಯಂತೆ. ತಮ್ಮ ಮುಂದಿನ ಚಿತ್ರ ಫಿಟ್ಟೂರ್‌ ಚಿತ್ರದ ಪ್ರಚಾರಕ್ಕಾಗಿ ಕತ್ರಿನಾ ಕೈಫ್ ಹಾಗೂ ಆದಿತ್ಯ ರಾಯ್ ಜೈ ಮಹಲ್ ಗೆ ತೆರಳುತ್ತಿದ್ದಾರೆ.

SCROLL FOR NEXT