ದುನಿಯಾ ವಿಜಯ್ 2 ನೇ ಪತ್ನಿ ಕೀರ್ತಿ ಮತ್ತು ಪುತ್ರ 
ಸಿನಿಮಾ ಸುದ್ದಿ

ದುನಿಯಾ ವಿಜಯ್ ಎರಡನೇ ಮದುವೆ: ವಿವಾಹದ ಬಗ್ಗೆ ನಟನ ಸ್ಪಷ್ಟೀಕರಣ

: ನಟ ದುನಿಯ ವಿಜಯ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ನಟಿ ಕೀರ್ತಿ ಗೌಡ ಅಲಿಯಾಸ್ ಕೀರ್ತಿ ಪಟಾಡಿ ಅವರೊಂದಿಗೆ ವಿಜಯ್ 2ನೇ ...

ಬೆಂಗಳೂರು: ನಟ ದುನಿಯ ವಿಜಯ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಅಭಿನಯಿಸಿರುವ ನಟಿ ಕೀರ್ತಿ ಪಟಾಡಿ ಅವರೊಂದಿಗೆ ವಿಜಯ್ 2ನೇ ಮದುವೆಯಾಗಿದ್ದು, ಅವರ ಮನೆಯವರಿಗೆಲ್ಲಾ ಇಷ್ಟ ಕೂಡ ಆಗಿದೆ ಎಂದು ಹೇಳಲಾಗಿದೆ.

ವಿಜಯ್ ಹಾಗೂ ಕೀರ್ತಿ ಅವರು ಕೆಲ ವರ್ಷಗಳಿಂದ ಪ್ರೀತಿಸಿದ್ದು, ಮನೆಯವರ ಒಪ್ಪಿಗೆ ಪಡೆದುಕೊಂಡೇ ಮದುವೆಯಾಗಿದ್ದಾರೆ ಎನ್ನಲಾಗಿದೆ. ವಿಜಯ್ ಹೊಸ ಪತ್ನಿ ಕೀರ್ತಿ ಅವರೊಂದಿಗೆ ಒಂದೂವರೆ ವರ್ಷದಿಂದಲೂ ಜೀವನ ನಡೆಸುತ್ತಿದ್ದಾರೆ. ಈಗಷ್ಟೇ ವಿಷಯ ಬೆಳಕಿಗೆ ಬಂದಿದೆ.

ನಾಗರತ್ನ ಅವರನ್ನು ಮದುವೆಯಾಗಿದ್ದ ವಿಜಯ್ ಅವರಿಗೆ ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರಿ ಕೊನೆಗೆ ತನ್ನ ಸಂಸಾರವನ್ನು ಸರಿ ಮಾಡಿಕೊಂಡ ನಂತರ ನಾಗರತ್ನ ಹಾಗೂ ವಿಜಯ್ ದಂಪತಿ ಒಂದಾಗಿದ್ದರು. ನಾಗರತ್ನ ಅವರ ಒಪ್ಪಿಗೆಯನ್ನು ಪಡೆದುಕೊಂಡೇ ವಿಜಯ್ 2ನೇ ಮದುವೆಯಾಗಿದ್ದಾರೆ.

ಅಂದಹಾಗೇ ಒಂದೂವರೆ ವರ್ಷದ ಹಿಂದೆಯೇ ವಿಜಿ ಮತ್ತು ಕೀರ್ತಿ ಮದುವೆಯಾಗಿದ್ದು, ಈಗಾಗಲೇ ಅವರಿಗೆ ಒಂದು ಮಗು ಕೂಡ ಇದೆ. ವಿಜಯ್ ಬಳಗದವರಿಗೆ ಹಿಂದೆಯೇ ವಿಷಯ ಗೊತ್ತಿತ್ತು ಎನ್ನಲಾಗಿದೆ. ತನ್ನ 2ನೇ ಪತ್ನಿ ಹಾಗೂ ಮಗುವಿನ ಜೊತೆ ಇರುವ ಫೋಟೋಗಳು ವೆಬ್‌ಸೈಟ್‌ನಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಮದುವೆ ಆಗಿರುವುದು ನಿಜ. ಪರಸ್ಪರ ಸಮ್ಮತಿ ಮೇರೆಗೆ ಮದುವೆ ಆಗಿದ್ದೇವೆ. ಎಲ್ಲರೂ ಚೆನ್ನಾಗಿದ್ದೀವಿ. ಒಂದೂವರೆ ವರ್ಷದ ಹಿಂದೆ ನಾನು-ಕೀರ್ತಿ ಮದುವೆ ಆಗಿದ್ದು. ಗಂಡು ಮಗು ಇದೆ ಯಾರಿಗೂ ಬೇಸರ ಆಗಿಲ್ಲ. ಯಾರನ್ನೂ ನೋಯಿಸಿಲ್ಲ. ಎಲ್ಲರೂ ಖುಷಿ ಆಗಿದ್ದೀವಿ. ನನಗೆ ನಾಗರತ್ನ ಮೇಲೆ ಅಪಾರ ಗೌರವ ಇದೆ. ಅವರ ಒಪ್ಪಿಗೆ ಪಡೆದ ಬಳಿಕವಷ್ಟೇ ಮದುವೆ ಆಗಿದ್ದು ಅಂತ ಮದುವೆ ವಿಚಾರ ಖಚಿತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್