ಕಬಾಲಿ ಬ್ರಾಂಡ್ ನ ಕಾಫಿ ಮಗ್ 
ಸಿನಿಮಾ ಸುದ್ದಿ

ಮೊಬೈಲ್ ಫೋನ್ ಕವಚ, ಕಾಫಿ ಮಗ್ ಗಳಿಗೂ ಬಂದ ಬ್ರಾಂಡ್ ಕಬಾಲಿ

ಏರ್ ಏಶಿಯಾ 'ಕಬಾಲಿ' ವಿಮಾನಯಾನ ನಿಮ್ಮ ಬಜೆಟ್ ಗೆ ಹೊರೆಯಾಗುವುದಾದರೆ ರಜನಿಕಾಂತ್ ಅಭಿಮಾನಿಗಳಿಗೆ ಇನ್ನಷ್ಟು ಕಬಾಲಿ ಬ್ರಾಂಡ್ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಮೊಬೈಲ್

ಚೆನ್ನೈ: ಏರ್ ಏಶಿಯಾ 'ಕಬಾಲಿ' ವಿಮಾನಯಾನ ನಿಮ್ಮ ಬಜೆಟ್ ಗೆ ಹೊರೆಯಾಗುವುದಾದರೆ ರಜನಿಕಾಂತ್ ಅಭಿಮಾನಿಗಳಿಗೆ ಇನ್ನಷ್ಟು ಕಬಾಲಿ ಬ್ರಾಂಡ್ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಮೊಬೈಲ್ ಫೋನ್ ಕವಚಗಳನ್ನು ಉತ್ಪಾದಿಸುವ ಕವರಿಟ್-ಅಪ್ ಸಂಸ್ಥೆ 'ಕಬಾಲಿ' ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡು ವಿಶಿಷ್ಟ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ. 
'ಕಬಾಲಿ' ಮೊಬೈಲ್ ಕವಚಗಳಿಂದ ಹಿಡಿದು ಕಾಫಿ ಮಗ್ ಗಳು, ಪೋಸ್ಟರ್ ಗಳನ್ನು ಕವರಿಟ್-ಅಪ್ ಸಂಸ್ಥೆ ಕಬಾಲಿ ಸಿನೆಮಾದ ಅಧಿಕೃತ ವಾಣಿಜ್ಯ ಸರಕಿನ ಜೊತೆಗಾರನಾಗಿ ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಸಿನೆಮಾ ಜುಲೈ 22 ಕ್ಕೆ ಬಿಡುಗಡೆಯಾಗಲಿದೆ. 
"ಈ ಅವಕಾಶ ನಮಗೆ ಸಿಕ್ಕಿರುವುದು ದೊಡ್ಡ ಸಂಗತಿ. ಇದು ಕೇವಲ ವಾಣಿಜ್ಯ ಸಂಗತಿಯಾಗದೆ, ಸ್ಫುರ್ತಿದಾಯಕ ಒಪ್ಪಂದ" ಎಂದು ಕವರಿಟ್-ಅಪ್ ಸಂಸ್ಥೆ ಸಂಸ್ಥಾಪಕ ರೋನಕ್ ಸರ್ದಾ ಹೇಳಿದ್ದಾರೆ.
100 ಕ್ಕಿಂತಲೂ ಹೆಚ್ಚು ಫೋನ್ ಗಳಿಗೆ ಕಬಾಲಿ ಕವಚಗಳು ಲಭ್ಯವಾಗಲಿವೆ. "ಫೋನ್ ಕವಚಗಳಲ್ಲದೆ ಕಾಫಿ ಮಗ್ ಗಳು, ಪೋಸ್ಟರ್ ಗಳು, ಟಿ ಶರ್ಟ್ ಗಳು ಕೂಡ ಲಭ್ಯವಿವೆ" ಎಂದು ರೋನಕ್ ಹೇಳಿದ್ದಾರೆ. 
ಫೋನ್ ಕವಚಗಳ ಬೆಲೆ 499 ರೂ ಇದ್ದು, ಮಗ್ ಮತ್ತು ಪೋಸ್ಟರ್ ಗಳು 249 ರು ಮತ್ತು 299 ರುಪಾಯಿಗೆ ಲಭ್ಯವಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP