ನಟಿ ಮೇಘನಾ 
ಸಿನಿಮಾ ಸುದ್ದಿ

'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಬಿಡುಗಡೆಯ ತವಕದಲ್ಲಿ ಮೇಘನಾ

ಮೂರು ವರ್ಷದ ಹಿಂದೆ 'ಚಾರ್ ಮಿನಾರ್' ಸಿನೆಮಾದಲ್ಲಿ ನಟಿಸಿದ್ದ ನಟಿ ಮೇಘನಾ, ಈಗ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯಲ್ಲಿ ನಟನೆ ಸುಲಭವಾಗಿತ್ತು

ಬೆಂಗಳೂರು: ಮೂರು ವರ್ಷದ ಹಿಂದೆ 'ಚಾರ್ ಮಿನಾರ್' ಸಿನೆಮಾದಲ್ಲಿ ನಟಿಸಿದ್ದ ನಟಿ ಮೇಘನಾ, ಈಗ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ'ಯಲ್ಲಿ ನಟನೆ ಸುಲಭವಾಗಿತ್ತು ಎಂದಿದ್ದಾರೆ.

"ನಾನು ನನ್ನ ಹಿಂದಿನ ಸಿನೆಮಾದಲ್ಲಿ ಮಾಡಿದ್ದ ಗಂಭೀರ ಪ್ರಯತ್ನಗಳಿಗೆ ಹೋಲಿಸಿದರೆ, ಸುನಿ ಸಿನೆಮಾದಲ್ಲಿ ನಟಿಸುವಾಗ ಆರಾಮವಾಗಿದ್ದೆ. ಇಲ್ಲಿ ನಾನು ನಟಿಸುತ್ತಿರುವ ಪಾತ್ರ ನಿಜ ಜೀವನದಲ್ಲಿದ್ದಂತೆಯೇ. ಆಧುನಿಕ ಹುಡುಗಿಯದ್ದು ಆದರೆ ತನ್ನ ಪರಿಧಿ ತಿಳಿದವಳ ಪಾತ್ರ ಇದು" ಎಂದು ವಿವರಿಸುತ್ತಾರೆ ಮೇಘನಾ.

'ಸಿಂಪಲ್ಲಾಗ್,,,' ಚಿತ್ರೀಕಾರಣ ಅದ್ಭುತ ಪಯಣ ಎನ್ನುವ ನಟಿ "ಇದು ಒಂದು ಪ್ರವಾಸ ಹೋಗಿ ಬಂದಂತಿತ್ತು. ಬೆಂಗಳೂರಿನಿಂದ ಕಾರಾವಾರಕ್ಕೆ ಹೋಗಿ ಬರಬೇಕಿತ್ತು, ಅಲ್ಲಿ ಸಾಕಷ್ಟು ಜನ ಹೊಸಬರನ್ನು ಭೇಟಿ ಮಾಡಿ ಗೆಳೆಯರಾದರು" ಎನ್ನುತ್ತಾರೆ.

ಸದ್ಯಕ್ಕೆ ಸಿನೆಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ "ನನಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಇಷ್ಟ. ನಾನು ಸಾಮಾನ್ಯವಾಗಿ ಯುವ ಪ್ರೇಕ್ಷಕರನ್ನು ಗುರಿಯಾಗಿಸಿಕೊಳ್ಳುತ್ತೇನೆ. ಅವರೇ ಸಿನೆಮಾಗಳನ್ನು ನೋಡುವವರು. ಅವರಿಗೆ ನಮ್ಮ ನಿಜ ಜೀವನವನ್ನು ತಿಳಿಯುವ ಆಸೆಯಿರುತ್ತದೆ. ಅವರ ಜೊತೆಗೆ ವೈಯಕ್ತಿಕ ಮಾತುಕತೆ ಬಾಂಡಿಂಗ್ ಗೆ ಸಹಕಾರಿ. ಕಾಲೇಜು ಉತ್ಸವಗಳಿಗೆ ಹೋಗಿ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸುವುದು ನನಗಿಷ್ಟ" ಎನ್ನುತ್ತಾರೆ ಮೇಘನಾ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಮಧ್ಯಾಹ್ನ 2.30ಕ್ಕೆ ರಾಜೀನಾಮೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT