ನಟಿ ಅದಿತಿ ರಾವ್ ಹೈದರಿ 
ಸಿನಿಮಾ ಸುದ್ದಿ

ಮಣಿರತ್ನಂ ಚಿತ್ರಕ್ಕಾಗಿ ತಮಿಳು ಕಲಿಯಲಿರುವ ಅದಿತಿ ರಾವ್ ಹೈದರಿ

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಲಿರುವ ಇನ್ನೂ ಹೆಸರಿಡಬೇಕಗಿರುವ ತಮಿಳು ಚಿತ್ರದಲ್ಲಿ ನಟಿಸಲು ನಟಿ ಅದಿತಿ ರಾವ್ ಹೈದರಿ ತಮಿಳು ಕಲಿಯಬೇಕಾಗಿ ಬಂದಿದೆ.

ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಲಿರುವ ಇನ್ನೂ ಹೆಸರಿಡಬೇಕಗಿರುವ ತಮಿಳು ಚಿತ್ರದಲ್ಲಿ ನಟಿಸಲು ನಟಿ ಅದಿತಿ ರಾವ್ ಹೈದರಿ ತಮಿಳು ಕಲಿಯಬೇಕಾಗಿ ಬಂದಿದೆ.

"ಚಿತ್ರೀಕರಣಕ್ಕೂ ಮೊದಲು ಅದಿತಿಯವರಿಗೆ ತಮಿಳು ಕಲಿಯಲು ನಿರ್ದೇಶಕ ಮಣಿರತ್ನಂ ಸೂಚಿಸಿದ್ದಾರೆ. ತಮ್ಮ ಭಾಗದ ಸಂಭಾಷಣೆಯನ್ನು ಅವರೇ ಡಬ್ ಮಾಡುತ್ತಾರೋ ಇಲ್ಲವೋ ತಿಳಿದಿಲ್ಲ, ಆದರೆ ನಟಿಸುವಾಗ ತುಟಿಯ ಚಲನೆ ನಿಖರಾವಾಗಿರಬೇಕೆಂಬುದು ಮಣಿರತ್ನಂ ಅವರ ಅಭಿಪ್ರಾಯ" ಎಂದು ಮೂಲಗಳು ತಿಳಿಸಿವೆ.

ಈ ಸಿನೆಮಾದ ಚಿತ್ರೀಕರಣ ಜುಲೈ ಅಂತ್ಯ ಅಥವಾ ಆಗಸ್ಟ್ ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಸಿನೆಮಾದಲ್ಲಿ ಕಾರ್ತಿ ಪೈಲಟ್ ಪಾತ್ರ ನಿರ್ವಹಿಸಿದ್ದು, ಎ ಆರ್ ರಹಮಾನ್ ಸಂಗೀತ ನೀಡಲಿದ್ದಾರೆ.

"ರಹಮಾನ್ ಅವರು ಟ್ಯೂನ್ ಗಳ ಮೇಲೆ ಈಗಾಗಲೇ ಕೆಲಸ ಪ್ರಾರಂಭಿಸಲಿದ್ದಾರೆ. ಒಂದು ಹಾಡು ಕೂಡ ಸಂಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ರವಿವರ್ಮನ್ ಛಾಯಾಗ್ರಹಣ ಮಾಡಲಿದ್ದು, ಮುಂದಿನ ವರ್ಷ ಈ ಸಿನೆಮಾ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT