ನಾನಾ ಪಾಟೇಕರ್ 
ಸಿನಿಮಾ ಸುದ್ದಿ

ನಾನಾ ಪಾಟೇಕರ್ ಮುಂದಿನ ಚಿತ್ರ 'ನೇಷನ್ ಫಸ್ಟ್'

ಇತ್ತೀಚೆಗಷ್ಟೇ ತೆರೆಕಂಡಿದ್ದ ನಟಸಾಮ್ರಾಟ್ ಚಿತ್ರದ ಬಳಿಕ ನಾನಾ ಪಾಟೇಕರ್ ಹಾಗೂ ನಿರ್ದೇಶಕ ಮಹೇಶ್ ಮಂಜ್ರೇಕರ್ ನೇಷನ್ ಫಸ್ಟ್ ಎಂಬ ಶೀರ್ಷಿಕೆಯಡಿ ಹೊಸ ಚಿತ್ರವನ್ನು ಮಾಡುತ್ತಿದ್ದಾರೆ.

ಮುಂಬೈ: ಇತ್ತೀಚೆಗಷ್ಟೇ ತೆರೆಕಂಡಿದ್ದ ನಟಸಾಮ್ರಾಟ್ ಚಿತ್ರದ ಬಳಿಕ ನಾನಾ ಪಾಟೇಕರ್ ಹಾಗೂ ನಿರ್ದೇಶಕ ಮಹೇಶ್ ಮಂಜ್ರೇಕರ್  ನೇಷನ್ ಫಸ್ಟ್ ಎಂಬ ಶೀರ್ಷಿಕೆಯಡಿ ಹೊಸ ಚಿತ್ರವನ್ನು ಮಾಡುತ್ತಿದ್ದಾರೆ. 
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೆರೆ ಕಂಡಿದ್ದ ನಟಸಾಮ್ರಾಟ್ ಚಿತ್ರದಲ್ಲಿ ಅಭಿನಯಿಸಿರುವ ನಾನಾ ಪಾಟೇಕರ್, ನೇಷನ್ ಫಸ್ಟ್ ಎಂಬ ಚಿತ್ರವನ್ನು ಶೀಘ್ರವೇ ಪ್ರಾರಂಭಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಚಿತ್ರಕ್ಕಾಗಿ ಸೊಗಸಾದ ಕಥೆ ಸಿಕ್ಕಿದ್ದು, ಮುಂದಿನ ವರ್ಷದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇದೇ ಚಿತ್ರ ತೆರೆಕಂಡರೆ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ. 
ಸುಮಾರು 100 ನಿಮಿಷಗಳ ಚಿತ್ರವಾಗಿರುವ ನೇಷನ್ ಫಸ್ಟ್ ನಲ್ಲಿ ಯಾವುದೇ ಹಾಡುಗಳಿಲ್ಲ. 100 ನಿಮಿಷಗಳಲ್ಲಿ ಒಂದು ಕಥೆಯನ್ನು ಹೇಳಬಹುದು, ಅದ್ಕಕಾಗಿ 3 ಗಂಟೆ ಸಿನಿಮಾ ಮಾಡಬೇಕಿಲ್ಲ ಎಂದು ನಾನಾಪಾಟೇಕರ್ ಹೇಳಿದ್ದಾರೆ.  ಕ್ರಿಕೆಟರ್ ಗಳು ಹಾಗೂ ಚಿತ್ರನಟರಿಗೆ ಪ್ರತಿ ದಿನವೂ ಟೆಸ್ಟ್ ಪಂದ್ಯ ಇರುತ್ತದೆ. ಹಿಂದೆ ಎಷ್ಟೋ ಶತಕಗಳನ್ನು ಗಳಿಸಿರಬಹುದು. ಆದರೆ ಈಗೇನು ಮಾಡಿದ್ದೀರಿ ಎಂಬುದು ಮುಖ್ಯವಾಗಲಿದೆ ಎಂದು ನಾನಾಪಾಟೇಕರ್ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT