ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ 74 ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಶುಭ ಕೋರಿದ್ದಾರೆ.
"ಆತ್ಮೀಯ ಸೀನಿಯರ್ ಬಚ್ಚನ್ (ಅಮಿತಾಬ್ ಬಚ್ಚನ್), ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಬಹುಮುಖ ಮತ್ತು ಮಾನವೀಯ ವ್ಯಕ್ತಿತ್ವಕ್ಕೆ ಹಲವಾರು ಅಭಿಮಾನಿಗಳಿದ್ದಾರೆ. ನಿಮ್ಮ ಸುಧೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
2015 ರಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪದ್ಮ ವಿಭೂಷಣ ನೀಡಿ ಗೌರವಿಸಲಾಗಿತ್ತು. ಬಿಗ್ ಬಿ 11 ನೇ ಅಕ್ಟೋಬರ್ 1942 ರಲ್ಲಿ ಜನಿಸಿದ್ದರು.