ಚೆನ್ನೈ: ಹಿರಿಯ ನಟ ಕಮಲ್ ಹಾಸನ್ ಬೆಂಕಿ ಆಕಸ್ಮಿಕದಿಂದ ಪಾರಾದ ಘಟನೆ ಶನಿವಾರ ಬೆಳಗ್ಗೆ ಅವರ ನಿವಾಸದಲ್ಲಿ ನಡೆದಿದೆ. ಚೆನ್ನೈನ ಅಲ್ವರ್ ಪೆಟ್ ನಲ್ಲಿನ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತು. ಆಗ ಅವರ ಸಿಬ್ಬಂದಿ ನಟನನ್ನು ಬೆಂಕಿಯಿಂದ ಪಾರು ಮಾಡಿದರು. ಬೆಂಕಿಯ ಹೊಗೆಯಿಂದ ಅಲ್ಲಿದ್ದವರಗೆ ಸ್ವಲ್ಪ ಹೊತ್ತು ಉಸಿರುಗಟ್ಟಿದಂತೆ ಆದರೂ ಯಾರಿಗೂ ಹಾನಿಯುಂಟಾಗಿಲ್ಲ.
ಇಂದು ಬೆಳಗಿನ ಜಾವ 3.25ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡು ತಮ್ಮನ್ನು ಸಿಬ್ಬಂದಿ ಬಚಾವು ಮಾಡಿದರು. ಮೇಲಿನಿಂದ ಕೆಳಗೆ ಇಳಿದು ಬಂದೆ. ಯಾರಿಗೂ ಹಾನಿಯುಂಟಾಗಿಲ್ಲ ಎಂದು ಸ್ವತಃ ಕಮಲ್ ಹಾಸನ್ ಅವರೇ ಟ್ವೀಟ್ ಮಾಡಿದರು.
ಅವರು ಟ್ವೀಟ್ ಪೋಸ್ಟ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳ ಪ್ರತಿಕ್ರಿಯೆಗಳು ಹರಿದುಬರಲಾರಂಭಿಸಿತು. ಅವರ ಪರಿಸ್ಥಿತಿ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದರು. ಸಂದೇಹ ವ್ಯಕ್ತಪಡಿಸಲಾರಂಭಿಸಿ ದರು. ಆಗ ಎಲ್ಲರನ್ನೂ ಸಮಾಧಾನ ಮಾಡಲು ಕಮಲ್ ಹಾಸನ್ ಅವರೇ ನಿಮ್ಮ ಕಾಳಜಿಗೆ ಕೃತಜ್ಞತೆಗಳು. ನಾನೀಗ ನಿದ್ದೆ ಮಾಡುತ್ತೇನೆ. ಗುಡ್ ನೈಟ್ ಎಂದು ಟ್ವೀಟ್ ಮಾಡಿದರು.