ರಾಮ್ ಗೋಪಾಲ್ ವರ್ಮಾ 
ಸಿನಿಮಾ ಸುದ್ದಿ

ಟೈಗರ್ ಶ್ರಾಫ್ ಗ್ರೇಟೆಸ್ಟ್ ವುಮೆನ್: ಜಾಕಿ ಶ್ರಾಫ್ ಪುತ್ರನ ಕಾಲೆಳೆದ ಆರ್ ಜಿವಿ

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟೈಗರ್ ಶ್ರಾಫ್ ವಿರುದ್ಧ ಅನುಚಿತ ಶಬ್ದ ಬಳಸಿ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿದ್ದಾರೆ...

ನವದೆಹಲಿ: ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ  ಟೈಗರ್ ಶ್ರಾಫ್ ವಿರುದ್ಧ ಅನುಚಿತ ಶಬ್ದ ಬಳಸಿ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಸನ್ನಿ ಲಿಯೋನ್ ನಂತರ ಪ್ರತಿಭಾವಂತ ನಟ ಟೈಗರ್ ಶ್ರಾಫ್ ವಿರುದ್ಧ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ.  ಟೈಗರ್ ಶ್ರಾಫ್ ಬಗ್ಗೆ ಆರ್ ಜಿವಿ ಬಳಸಿರುವ ಶಬ್ದಗಳನ್ನು ಕಾಲ್ ರೆಕಾರ್ಡ್ ಮಾಡಿರುವ ಮತ್ತೊಬ್ಬ ನಟ ವಿದ್ಯುತ್ ಜಾಮ್ವಾಲ್ ಅದನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. 
ಕುಡಿತ ಮತ್ತಿನಲ್ಲಿದ್ದ ರಾಮ್ ಗೋಪಾಲ್ ವರ್ಮಾ' ನಾನು ನನ್ನ ಜೀವನದಲ್ಲಿ ನೋಡಿದ ಅತಿ ದೊಡ್ಡ ಮಹಿಳೆ ಟೈಗರ್ ಶ್ರಾಫ್ ಎಂದು ಹೇಳಿದ್ದಾರೆ. ಜೊತೆಗೆ ಅನೇಕ ಅನುಚಿತ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಜಾಮ್ವಾಲ್ ಮತ್ತು ರಾಮ್ ಗೋಪಾಲ್ ವರ್ಮಾ ಇಡೀ ಸಂಭಾಷಣೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇನ್ನು ವಿದ್ಯುತ್ ಜಾಮ್ವಾಲ್ ತಮ್ಮ ಸಂಭಾಷಣೆಯನ್ನು ಬಹಿರಂಗ ಪಡಿಸಿರುವುದಕ್ಕೆ ರಾಮ್ ಗೊಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

ಲೋಕಭವನ -ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ: ಮತ ಪತ್ರ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಧಾರವಾಡ: ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್‌ ಪಠಾಣ್‌ ಹತ್ಯೆ; ಸ್ವಗೃಹದಲ್ಲೇ ಅಟ್ಟಾಡಿಸಿ ಬರ್ಬರ ಕೊಲೆ

ಲೆಬನಾನ್‌ನಲ್ಲಿ ನಾಗರಿಕರ ಸಾವಿನ ಘಟನೆಗಳ ಬಗ್ಗೆ ಭಾರತ ಕಳವಳ; ಇಸ್ರೇಲ್ ಗೆ ತೀವ್ರ ಹಿನ್ನಡೆ!

Hormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!

SCROLL FOR NEXT