ಪ್ರಿಯಾಂಕ 
ಸಿನಿಮಾ ಸುದ್ದಿ

ಮಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತ ಕನ್ನಡದ ಪ್ರಿಯಾಂಕ

ಕನ್ನಡದ ಗಣಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದ ಪ್ರಿಯಾಂಕ ಇದೀ ಮಾಲಿವುಡ್ ನಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ...

ಕನ್ನಡದ ಗಣಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದ ಪ್ರಿಯಾಂಕ ಇದೀ ಮಾಲಿವುಡ್ ನಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. 
ಮಲಯಾಳಂನ ರೋಶನ್ ಆಂಡ್ರೂಸ್ ನಿರ್ದೇಶನದ ಕಯಾಮುಕುಲಂ ಕೊಚುನ್ನಿ ಚಿತ್ರಕ್ಕಾಗಿ ಪ್ರಿಯಾಂಕ ಸಹಿ ಮಾಡಿದ್ದಾರೆ. ಇದು 19ನೇ ಶತಮಾನದ ಚಿತ್ರದ ಕಥೆಯಾಧಾರಿತ ಚಿತ್ರವಾಗಲಿದ್ದು ಮಾಲಿವುಡ್ ನ ನಟ ನವೀನ್ ಪೌಲಿ ಮತ್ತು ಅಮಲಾ ಪೌಲ್ ಜತೆ ಪ್ರಿಯಾಂಕ ಪರದೆ ಹಂಚಿಕೊಳ್ಳಲಿದ್ದಾರೆ. 
ಸೆಪ್ಟೆಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದ್ದು ಇದಕ್ಕೂ ಮುಂಚೆ ಪ್ರಿಯಾಂಕ ಮಾಲಿವುಡ್ ಎಂಟ್ರಿ ಕುರಿತು ಚಿತ್ರದ ತಂಡ ಘೋಷಣೆ ಮಾಡಲಿದೆ. ಇನ್ನು ಮಂಗಳೂರು ಮತ್ತು ಉಡುಪಿಯಲ್ಲೂ ಚಿತ್ರದ ಚಿತ್ರೀಕರಣ ನಡೆಯಲಿದೆ. 
ಗಣಪ ಚಿತ್ರದ ನಂತರ ಪ್ರಿಯಾಂಕ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲೂ ಅಭಿನಯಿಸಿದ್ದರು. ಇನ್ನು ಕನ್ನಡ ಚಿತ್ರಗಳಿಗೆ ಸಹಿ ಮಾಡಿರುವ ಪ್ರಿಯಾಂಕ ಸುನಿ ನಿರ್ದೇಶನದ ಜಾನ್ ಸಿನಾ ಮತ್ತು ಕಾರ್ತಿಕ್ ಸರಗೂರ್ ನಿರ್ದೇಶನದ ಭೀಮ ಸೇನ ನಳ ಮಹಾರಾಜ ಚಿತ್ರದಲ್ಲೂ ಅಭಿನಯಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು