ನವದೆಹಲಿ: ಬಾಲಿವುಡ್ ನಟಿ ರಿಯಾಸೇನ್ ತನ್ನ ಗೆಳೆಯ ಶಿವಾಂ ತಿವಾರಿ ಜೊತೆ ಈ ತಿಂಗಳಾಂತ್ಯದಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು, ಆದರೆ ಇತ್ತೀಚಿನ ವರದಿಗಳ ಪ್ರಕಾರ ಈಗಾಗಲೇ ರಿಯಾಸೇನ್ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ,
ಮೂನ್ ಮೂನ್ ಸೇನ್ ಪುತ್ರಿ ರಿಯಾ ಸೇನ್, ಇತ್ತೀಚೆಗೆ ಪುಣೆಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶಿವಾಂ ತಿವಾರಿ ಜೊತೆ ಹಸೆಮಣೆ ಏರಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ವಿವಾಹ ಸಮಾರಂಭಕ್ಕೆ ಕೇವಲ ಸಂಬಂಧಿಕರು ಮತ್ತು ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಎಕ್ತಾ ಕಪೂರ್ ಅವರ ರಾಗಿಣಿ ಎಂಎಂಎಸ್ 2.2 ವೆಬ್ ಸಿರೀಸ್ ನಲ್ಲಿ ರಿಯಾಸೇನ್ ಕಾಣಿಸಿಕೊಂಡಿದ್ದರು. ವಿವಾಹದ ಬಗ್ಗೆ ರಿಯಾಸೇನ್ ಅವರೇ ಅಧಿಕೃತವಾಗಿ ಪ್ರಕಟಿಸಬೇಕಿದೆ.