ನಿಕ್ಕಿ ಗಿರಾನಿ 
ಸಿನಿಮಾ ಸುದ್ದಿ

"ನಾನು ಬ್ಯುಸಿಯಾಗಿರುವುದೇ ನನಗೆ ಇಷ್ಟ": ನಿಕ್ಕಿ ಗಿರಾನಿ

ನಿಕ್ಕಿ ಗಿರಾನಿ, ಬೆಂಗಳೂರಿನ ಈ ಹುಡುಗಿಗೆ ನಟಿಯಾಗಬೇಕೆನ್ನುವ ಯಾವ ಕನಸೂ ಇರಲಿಲ್ಲ.

ಬೆಂಗಳೂರು: ನಿಕ್ಕಿ ಗಿರಾನಿ, ಬೆಂಗಳೂರಿನ ಈ ಹುಡುಗಿಗೆ ನಟಿಯಾಗಬೇಕೆನ್ನುವ ಯಾವ ಕನಸೂ ಇರಲಿಲ್ಲ. ಆದರೆ ಕಳೆದ ಮೂರು ವರೆ ವರ್ಷಗಳಲ್ಲಿ ಅವಳ ಜೀವದಲ್ಲಾದ ಬದಲಾವಣೆ ಅವಳನ್ನು ನಟಿಯನ್ನಾಗಿ ರೂಪಿಸಿದೆ. ನಿಕ್ಕಿ ಇದುವರೆಗೆ 27 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ!
ದಕ್ಷಿಣದ ನಾಲ್ಕೂ ಭಾಷೆಯ ಚಿತ್ರಗಳಲ್ಲಿ ಪಾತ್ರವಹಿಸಿದ ನಿಕ್ಕಿ ಇದುವರೆಗೂ ಒಂದೇ ಒಂದು ದಿನವೂ ರಜೆ ಪಡೆದಿಲ್ಲವಂತೆ! 'ಓ ಪ್ರೇಮವೆ' ನಿಕ್ಕಿ ಅಭಿನಯಿಸುತ್ತಿರುವ ನಾಲ್ಕನೇ ಕನ್ನಡ ಚಿತ್ರವಾಗಿದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕಳೆದ ವಾರವಷ್ಟೇ ನಡೆದಿದ್ದು ನಿಕ್ಕಿ ತನ್ನ ಶೂಟಿಂಗ್ ಗಳಲ್ಲಿ ಬ್ಯುಸಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ."ನಾನು ನನ್ನ ನಟನೆಯ ಇನ್ನೂ ನಾಲ್ಕು ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇನೆ.ನಾನು ಶೂಟಿಂಗ್ ಸೆಟ್ ಒಂದರಿಂದ ಇನ್ನೊಂದಕ್ಕೆ ತೆರಳುತ್ತಲೇ ಇರುತೇನೆ. ಇದೀಗ ತಾನೆ ಕಾಲಕಾಲಪ್ಪು 2 ಚಿತ್ರೀಕರಣ ಪೂರೈಸಿದ್ದೇನೆ. ಸೋಮವಾರದಿಂದ ಚಾರ್ಲಿ ಚಾಪ್ಲಿನ್ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಇದು ಪ್ರಭು ದೇವ ಮತ್ತು ತಂದದವರ ಚಿತ್ರ. ನಾನು ಬ್ಯುಸಿಯಾಗಿರುವುದೇ ನನಗೆ ಇಷ್ಟ. ಎರಡು ವರ್ಷಗಳಿಂದ ನಾನು ಯಾವ ರಜೆ ಪಡೆದಿಲ್ಲ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ."
ನಿಕ್ಕಿ ಇದಾಗಲೇ ಕನ್ನಡದ ಅಜಿತ್, ಜಂಬೂ ಸವಾರಿ ಹಾಗೂ ಸಿದ್ದಾರ್ಥ ಚಿತ್ರಗಳಲ್ಲಿ ನಟಿಸಿದ್ದಾರೆ. "ಬೆಂಗಳೂರು ನನ್ನ ಮನೆ, ನನ್ನ ಪೋಷಕರು ಅಲ್ಲಿಯೇ ನೆಲೆಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟಿಸುವುದೆಂದರೆ ಮನೆಯಲ್ಲೇ ಕೆಲಸ ಮಾಡಿದಂತೆ. ಅತಿ ಶೀಘ್ರವಾಗಿ ನಾನು ಇನ್ನೊಂದು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನಾನು ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ನನಗಿರುವ ಬಿಡುವಿಲ್ಲದ ಶೆಡ್ಯೂಲ್ ಗಳಿಂದ ನನಗೆ ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದರೆ ಕನ್ನಡ ನಿಉರ್ದೇಶಕರು ನನ್ನನ್ನು ಮರೆತಿಲ್ಲ. ಇಂದಿಗೂ ಬೆಂಗಳೂರು ಹುಡುಗಿ ಎಂದೇ ಗುರುತಿಸುತ್ತಾರೆ.ನಾನೂ ಅದನ್ನು ಮನಸಾ ಇಷ್ಟನ್ ಪಡುತ್ತೇನೆ"  ನಿಕ್ಕಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT