ಕೆಜಿಎಫ್ ಚಿತ್ರದಲ್ಲಿ ಯಶ್ 
ಸಿನಿಮಾ ಸುದ್ದಿ

ಮಫ್ತಿ ಚಿತ್ರ ನಿರ್ದೇಶಕ ನರ್ತನ್ ಜೊತೆ ಯಶ್ ಮುಂದಿನ ಸಿನಿಮಾ

ಬಹುದೊಡ್ಡ ಬಜೆಟ್ ನ ಕೆಜಿಎಫ್ ಚಿತ್ರದ ಮೇಲೆಯೇ ಸದ್ಯಕ್ಕೆ ಸಂಪೂರ್ಣ ಗಮನಹರಿಸಿರುವ ನಟ ಯಶ್ ಗೆ ಮತ್ತೊಬ್ಬ ಯುವ ನಿರ್ದೇಶಕ ಆಕ್ಷನ್, ಕಟ್ ಹೇಳಲು ಮುಂದಾಗಿದ್ದಾರೆ...

ಬಹುದೊಡ್ಡ ಬಜೆಟ್ ನ ಕೆಜಿಎಫ್ ಚಿತ್ರದ ಮೇಲೆಯೇ ಸದ್ಯಕ್ಕೆ ಸಂಪೂರ್ಣ ಗಮನಹರಿಸಿರುವ ನಟ ಯಶ್ ಗೆ ಮತ್ತೊಬ್ಬ ಯುವ ನಿರ್ದೇಶಕ ಆಕ್ಷನ್, ಕಟ್ ಹೇಳಲು ಮುಂದಾಗಿದ್ದಾರೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ ಪ್ರಕಾರ, ಮೊದಲ ಚಿತ್ರ ಮಫ್ತಿಯಲ್ಲಿ ಗೆಲುವು ಕಂಡ ನಿರ್ದೇಶಕ ನರ್ತನ್ ಅವರ ಜೊತೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ. ಯಶ್ ಈಗಾಗಲೇ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಿರ್ದೇಶಕರು ಚಿತ್ರದ ಸ್ಕ್ರಿಪ್ಟ್ ಕೆಲಸ ಆರಂಭಿಸಲಿದ್ದಾರೆ.
ಈ ಹಿಂದೆ ಒಟ್ಟಿಗೆ ಕೆಲಸ ಮಾಡದಿದ್ದರೂ ಕೂಡ ಕೆಲ ಸಮಯಗಳಿಂದ ಯಶ್ ಮತ್ತು ನರ್ತನ್ ಪರಿಚಿತರು. ಮಾಸ್ಟರ್ ಪೀಸ್ ಸಿನಿಮಾ ದಿನದಿಂದಲೂ ಕೂಡ ಇಬ್ಬರೂ ಕೆಲ ಪ್ರಾಜೆಕ್ಟ್ ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರಂತೆ. ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಸಹಾಯಕರಾಗಿ ಕೆಜಿಎಫ್ ಚಿತ್ರಕ್ಕೆ ನರ್ತನ್ ಕೆಲಸ ಮಾಡುತ್ತಿದ್ದು ಯಶ್ ಅವರಿಗೆ ನರ್ತನ್ ಕೆಲಸದ ಮೇಲೆ ನಂಬಿಕೆ ಬಂದಿದೆಯಂತೆ. 
ನರ್ತನ್ ನಿರ್ದೇಶನದ ಚಿತ್ರಕ್ಕೆ ಕೂಡ ಜಯಣ್ಣ ಕಂಬೈನ್ಸ್ ಬಂಡವಾಳ ಹೂಡುತ್ತಿದ್ದಾರೆ. 
ಜಯಣ್ಣ ಕಂಬೈನ್ಸ್ ನಡಿಯಲ್ಲಿ ನರ್ತನ್ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು ಯಶ್ ಅವರಿಗೆ ಈ ಪ್ರೊಡಕ್ಷನ್ ಹೌಸ್ ನಡಿ 6ನೇ ಚಿತ್ರವಾಗಿದೆ. ಜನವರಿ 8ರಂದು ಯಶ್ ಜನ್ಮದಿನದಂದು ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ