ಬೆಂಗಳೂರು: ೧೫ ವರ್ಷಗಳ ಹಿಂದೆ ದರ್ಶನ್ ಅವರ 'ಮೆಜೆಸ್ಟಿಕ್' ಸಿನೆಮಾ ನಿರ್ದೇಶಿಸುವ ಮೂಲಕ ಬೆಳಕಿಗೆ ಬಂದ ಪಿ ಎನ್ ಸತ್ಯ ಇಂದಿಗೂ ಮಾಸ್ ನಿರ್ದೇಶಕ ಎಂದೇ ಪ್ರಖ್ಯಾತ. 'ದಾಸ', 'ಶಾಸ್ತ್ರಿ', 'ಗೂಳಿ', 'ಶಿವಾಜಿನಗರ', ಈ ನಿರ್ದೇಶಕ ಭೂಗತ ಬೆಂಗಳೂರಿನ ಬಗ್ಗೆ ಮಾಡಿದ ಕೆಲವು ಸಿನೆಮಾಗಳು.
ಈಗ ಆದಿತ್ಯ ನಾಯಕನಟನಾಗಿರುವ ಮತ್ತೊಂದು ಮಾಸ್ ಭೂಗತಲೋಕದ ಸಿನೆಮಾವನ್ನು ನಿರ್ದೇಶಿಸಿ ಮುಗಿಸಿರುವ ಸತ್ಯ ಜನರ ಮನಸ್ಥಿತಿ ಬದಲಾಗಿದ್ದರು ಮಾಸ್ ಚಿತ್ರಗಳಿಗೆ ಅಪಾರ ಬೇಡಿಕೆಯಿದ್ದೆ ಇದೆ. "ಮಾಸ್ ಮನರಂಜನ ಚಿತ್ರಗಳಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ" ಎನ್ನುತ್ತಾರೆ.
'ಬೆಂಗಳೂರು ಅಂಡರ್ವರ್ಲ್ಡ್' ನಿರ್ದೇಶಕರ ೨೪ ನೇ ಸಿನೆಮಾ. ಆರೋಗ್ಯ ಕಾರಣಗಳಿಂದ ಸಿನೆಮಾ ರಂಗದಿಂದ ಸ್ವಲ್ಪ ಸಮಯ ದೂರವುಳಿದಿದ್ದ ಸತ್ಯ ಕಳೆದ ವರ್ಷದಿಂದ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದರು.
ಆರೋಗ್ಯದ ವಿಷಯದ ಬಗ್ಗೆ ಚರ್ಚಿಸಲು ಬಯಸದ ಸತ್ಯ "ಈ ವಿಶ್ವದಲ್ಲಿ ಗಲಾಟೆಯಿಲ್ಲದ ಒಂದು ತಿಂಗಳು, ಒಂದು ದಿನವಾದರೂ ಇದೆಯೇ ತಿಳಿಸಿ. ಪ್ರತಿ ದಿನ ಜೈಲಿನಿಂದ ತಪ್ಪಿಸಿಕೊಂಡದ್ದೋ, ಗುಂಡಿನ ದಾಳಿಯೋ, ಮಾಫಿಯಾ ಚಟುವಟಿಕೆಗಳ ಬಗ್ಗೆಯೂ ಕೇಳುತ್ತಿರುತ್ತೇವೆ. ಇಂದಿಗೂ ಕೂಡ ಇಂತಹ ಘಟನೆಗಳನ್ನು ಕೇಳುತ್ತಲೇ ಇರುತ್ತೇವೆ. ಆದುದರಿಂದ ಭೂಗತ ಚಟುವಟಿಕೆಗಳು ಎಂದಿಗೂ ಇತಿಹಾಸವಾಗುವುದಿಲ್ಲ" ಎನ್ನುತ್ತಾರೆ.
ಇದನ್ನು ಗ್ಯಾಂಗ್ಸ್ಟರ್ ಸಿನೆಮಾ ಎಂದು ಕರೆದುಕೊಳ್ಳಲು ನಿರಾಕರಿಸುವ ಸತ್ಯ "ನನ್ನ ಸಿನೆಮಾ ಕಲ್ಪನೆ. ಭೂಗತ ಲೋಕದ ಕಥೆಯನ್ನು ಹೇಳುವುದರ ಜೊತೆಗೆ ಹಿನ್ನಲೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಮುಖ್ಯ. ಕೇವಲ ಶೀರ್ಷಿಕೆ ನೋಡಿ ಇಂದಿನ ಯುವಜನತೆ ಸಿನೆಮಾಗಳನ್ನು ನೋಡುವುದಿಲ್ಲ ಜನಕ್ಕೆ ಒಳ್ಳೆಯ ಕಂಟೆಂಟ್ ಬೇಕು" ಎನ್ನುತ್ತಾರೆ ಹಿರಿಯ ನಿರ್ದೇಶಕ.
ನಟ ಆದಿತ್ಯ ಬಗ್ಗೆಯೂ ಪ್ರಶಂಸೆಯ ಸುರಿಮಳೆಗಯ್ಯುವ ನಿರ್ದೇಶಕ "ಬೆಂಗಳೂರು ಅಂಡರ್ವರ್ಲ್ಡ್ ನಂತರ ಅವರಿಗೆ ೨೫-೩೦ ರೌಡಿಸಂ ಸಿನೆಮಾಗಳು ಸಿದ್ಧವಾಗಿರುತ್ತವೆ ಎಂಬ ಭರವಸೆಯಿದೆ" ಎನ್ನುತ್ತಾರೆ ಸತ್ಯ.