ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

ಕಿರಿಕ್ ಪಾರ್ಟಿ ರಶ್ಮಿಕಾಗೆ ಖುಲಾಯಿಸಿದ ಅದೃಷ್ಟ: ಮುಂದಿನ ಸಿನಿಮಾದಲ್ಲಿ ಪುನೀತ್ ಗೆ ನಾಯಕಿ

ಕಿರಿಕ್ ಪಾರ್ಟಿ ಸಿನಿಮಾದಲ್ಲಿನ ಅಭಿನಯ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಜೀವನವನ್ನೇ ಬದಲಾಯಿಸಿದೆ. ಕಿರಿಕ್ ಪಾರ್ಟಿ ಸಿನಿಮಾ ನಂತರ ರಶ್ಮಿಕಾ ಗೆ ಅವಕಾಶಗಳ ...

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದಲ್ಲಿನ ಅಭಿನಯ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಜೀವನವನ್ನೇ ಬದಲಾಯಿಸಿದೆ. ಕಿರಿಕ್ ಪಾರ್ಟಿ ಸಿನಿಮಾ ನಂತರ ರಶ್ಮಿಕಾ ಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿವೆ.

ಈಗಾಗಲೇ ಮೂರು ಸಿನಿಮಾಗಳಲ್ಲಿ ಅಭಿನಯಸಿಲು ಅವಕಾಶ ಪಡೆದಿರುವ ರಶ್ಮಿಕಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗುವ ಅವಕಾ ಸಿಕ್ಕಿದೆ. ಹರ್ಷ ನಿರ್ದೇಶನದ ಪೂಜಾಯ್ ರಿಮೇಕ್ ಸಿನಿಮಾಗೆ ರಶ್ಮಿಕಾ ಆಯ್ಕೆಯಾಗಿದ್ದಾರೆ.

ಪೂಜಾಯ್ ಸಿನಿಮಾ ಗೆ ಹಲವು ನಾಯಕಿಯರ ಹೆಸರು ಕೇಳಿ ಬಂದಿದ್ದವು. ಅಂತಿಮವಾಗಿ ಸ್ಥಳೀಯ ಪ್ರತಿಭೆಯಾದ ರಶ್ಮಿಕಾ ಮಂದಣ್ಣ ಅವರನ್ನು ಫೈನಲ್ ಮಾಡಲಾಗಿದೆ ಎಂದು ಹರ್ಷ ತಿಳಿಸಿದ್ದಾರೆ. ತನ್ನ ಸಿನಿಮಾಗೆ ಕನ್ನಡದ ಹುಡುಗಿ ನಾಯಕಿಯಾಗುತ್ತಿರುವುದು  ಸಂತಸ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾ ನೋಡಿದ ಮೇಲೆ ಆಕೆ ಭರವಸೆಯ ನಟಿ ಎಂದು ನನಗೆ ಅನಿಸಿತು. ಹೀಗಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಂಡೆ ಎಂದು ಹರ್ಷ ತಿಳಿಸಿದ್ದಾರೆ. ಪೂಜಾಯ್ ಸಿನಿಮಾ ತಂಡ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್