ಮಡಿಕೇರಿ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿದ್ದ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿ ಮಡಿಕೇರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ.
ರಶ್ಮಿಕಾ ಮಂದಣ್ಣ ಹುಟ್ಟೂರಾದ ಕೊಡಗು ಜಿಲ್ಲೆಯ ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಇಂದು ರಾತ್ರಿ 18 ಕೆಜಿ ಕೇಕ್ ಕತ್ತರಿಸಿ ಉಂಗುರ ಬದಲಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು.
ಶ್ರದ್ಧಾ ಪೊನ್ನಪ್ಪ ವಿನ್ಯಾಸ ಮಾಡಿರುವ ಪಿಂಕ್ ಬಣ್ಣದ ಗೌನ್ ನಲ್ಲಿ ರಶ್ಮಿಕಾ ಕಂಗೊಳಿಸಿದರು. ಇನ್ನು ರಕ್ಷಿತ್ ತಾವೇ ವಿನ್ಯಾಸ ಮಾಡಿರುವ ವಿಶೇಷ ಸೂಟ್ ಧರಿಸಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಸ್ಯಾಂಡಲ್ವುಡ್ ಗಣ್ಯರು, ಆತ್ಮೀಯರು, ಹಿತೈಷಿಗಳು ಪಾಲ್ಗೊಂಡಿದ್ದರು.