ಸಿನಿಮಾ ಸುದ್ದಿ

ಕರಣ್ ಜೋಹರ್ ಇಲ್ಲದೆ ಬಾಲಿವುಡ್ ಅಪೂರ್ಣ: ಸೈಫ್ ಅಲಿ ಖಾನ್

Guruprasad Narayana
ಮುಂಬೈ: ನಿರ್ದೇಶಕ ಕರಣ್ ಜೋಹರ್ ಇಲ್ಲದೆ ಬಾಲಿವುಡ್ ಚಿತ್ರರಂಗ ಅಪೂರ್ಣ ಎಂದು ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ. 
ಮುಂದಿನ ತಿಂಗಳು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಭಾರತೀಯ ಸಿನೆಮಾ ಅಕಾಡೆಮಿ ಪ್ರಶಸ್ತಿ (ಐಐಎಫ್ಎ) ಸಮಾರಂಭವನ್ನು ನಡೆಸಿಕೊಡಲು ಕರಣ್ ಜೊತೆಗೆ ಕೈಜೋಡಿಸಿದ್ದಾರೆ ಸೈಫ್. 
ಐಐಎಫ್ಎ ೨೦೧೭ ಪತ್ರಿಕಾ ಗೋಷ್ಠಿಯಲ್ಲಿ ಕರಣ್ ಮತ್ತು ನಟ ವರುಣ್ ಧವನ್ ಜೊತೆಗೆ ಭಾಗಿಯಾಗಿದ್ದ ಸೈಫ್ "ಕರಣ್ ಜೋಹರ್ ಇಲ್ಲದೆ ಬಾಲಿವುಡ್ ಚಿತ್ರರಂಗ ಅಪೂರ್ಣ" ಎಂದು ನುಡಿದಿದ್ದಾರೆ.
ಈ ಹೇಳಿಕೆಯ ಹಿಂದಿನ ಕಾರಣವೇನು ಎಂದು ಪ್ರಶಿಸಿದ್ದಕ್ಕೆ "'ಬಾಹುಬಲಿ...' ಅದಿಲ್ಲದೆ ನಮ್ಮ ಚಲನಚಿತ್ರರಂಗವನ್ನು ಊಹಿಸಿಕೊಳ್ಳಬಲ್ಲಿರಾ?" ಎಂದು ಕೂಡ ಅವರು ಹೇಳಿದ್ದಾರೆ. 
ಇದಕ್ಕಾಗಿ ಕರಣ್ ಸೈಫ್ ಅವರಿಗೆ ಧನ್ಯವಾದ ತಿಳಿಸಿದ್ದಲ್ಲದೆ "೨೦೦೦ನೇ ಇಸವಿಯಿಂದ ನಾನು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೇನೆ. ಆಗ ಫಿಲಂ ಫೇರ್ ಪ್ರಶಸ್ತಿ. ಈಗ ೧೭ ವರ್ಷ ಕಳೆದಿದೆ! ಪ್ರತಿವರ್ಷ ಈ ಕೆಲಸ ಸಿಗುತ್ತಿರುವುದಕ್ಕೆ ಸಂತಸವಾಗಿದೆ! ಈ ಅನುಭವ ಆಪ್ತವಾದದ್ದು" ಎಂದಿದ್ದಾರೆ. 
ಕರಣ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಕೂಡ ಈ ಪ್ರಶಸ್ತಿಗೆ ಸೆಣಸುತ್ತಿದೆ. ಇದರ ಬಗ್ಗೆ ಆತಂಕವಿದೆಯೇ ಎಂವ ಪ್ರಶ್ನೆಗೆ "ಗೆದ್ದರೆ ಅದು ಅದ್ಭುತ ಆದರೆ ಸೋತರೆ ಅದಕ್ಕೆ ತಲೆಕೆಡಿಸಿಕೊಳ್ಳಬಾರದು" ಎನ್ನುತ್ತಾರೆ ಕರಣ್.
ನ್ಯೂಯಾರ್ಕ್ ನ ಮೆಟ್ ಲೈಫ್ ಕ್ರೀಡಾಂಗಣದಲ್ಲಿ ಜುಲೈ ೧೪ ಮತ್ತು ೧೫ ರಂದು ಐಐಎಫ್ಎ ಪ್ರಶಸ್ತಿ ಘೋಷಣೆ ಮತ್ತು ಪ್ರಧಾನ ಸಮಾರಂಭ ನಡೆಯಲಿದೆ.  
SCROLL FOR NEXT