ತಿರುನೆಲ್ವೇಲಿ: ಹಿಂದೂಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ದೂರಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ತಿರುನೆಲ್ವೇಲಿ ಜಿಲ್ಲಾ ನ್ಯಾಯಾಲಯದಲ್ಲಿ ಹಿಂದೂ ಮಕ್ಕಳ್ ಕಾಚಿ ಸದಸ್ಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಪತ್ರಿಕೆಯೊಂದರಲ್ಲಿ ಮೂಡಿರುವ ವರದಿಯ ಪ್ರಕಾರ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮಹಾಕಾವ್ಯ ಮಹಾಭಾರತದ ಬಗ್ಗೆ ಮಾತನಾಡಿ "ಮಹಾಭಾರತದಲ್ಲಿ ಪಾಂಚಾಲಿಯನ್ನು ಪಣಕ್ಕಿಟ್ಟು ಪುರುಷರು ಜೂಜಾಡಿದ್ದರು" ಎಂದಿದ್ದಲ್ಲದೆ "ಅವಳನ್ನು ಜೂಜಿಗೆ ಆಧಾರವಾಗಿ ನಿಲ್ಲಿಸಲಾಗಿತ್ತು ಮತ್ತು ಮಹಿಳೆಯನ್ನು ಒಂದು ವಸ್ತುವಾಗಿಟ್ಟುಕೊಂಡು ಪುರುಷರು ಜೂಜಾಡಿದ ಪುಸ್ತಕವನ್ನು ಗೌರವಿಸುವ ದೇಶ ಭಾರತ" ಎಂದಿದ್ದರು ಎನ್ನಲಾಗಿದೆ.
ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಿಂದೂ ಮಕ್ಕಳ್ ಕಾಚಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ರಾಮ ರವಿಕುಮಾರ್ ಹೇಳಿದ್ದು, ಸಂಸ್ಥೆಯ ಸದಸ್ಯರು ಈಗ ಕೋರ್ಟ್ ಮೊರೆ ಹೋಗಿದ್ದಾರೆ.
ಈ ಹಿಂದೆ ಕಮಲಹಾಸನ್ ಅವರ ವಿಶ್ವರೂಪಂ ಸಿನೆಮಾ ಬಿಡುಗಡೆಯಾಗಿದ್ದಾಗ ಕೆಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಪ್ರತಿಭಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics