ಸಿನಿಮಾ ಸುದ್ದಿ

ಅನುಷ್ಕಾ ಶೆಟ್ಟಿ ಜನ್ಮದಿನ: ತನ್ನ ಕಾರು ಚಾಲಕನಿಗೆ 12 ಲಕ್ಷ ರೂ. ಮೌಲ್ಯದ ಕಾರು ಉಡುಗೊರೆ ನೀಡಿದ ನಟಿ!

Raghavendra Adiga
ಹೈದರಾಬಾದ್: ಬಾಹುಬಲಿಯಲ್ಲಿ ದೇವಸೇನಾ ಆಗಿ ಮಿಂಚಿದ್ದ ಅನುಷ್ಕಾ ಶೆಟ್ಟಿ ಇಂದು 36 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ  ಅನುಷ್ಕಾ ತಮ್ಮ ಕಾರ್ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರ್ ಒಂದನ್ನು ಉಡುಗೊರೆ ನೀಡಿದ್ದಾರೆ.
ಕಾರ್ ಡ್ರೈವರ್ ಅವರ ಕೆಲಸದ ನಿಷ್ಠೆ, ಪ್ರಾಮಾಣಿಕತೆಯನ್ನು ಮೆಚ್ಚಿರುವ ನಟಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನನ್ನನ್ನು ಚೆನ್ನಾಗಿ ಗಮನಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ನಾನು ಅವರಿಗೆ 12 ಲಕ್ಷ ಬೆಲೆಬಾಳುವ ಕಾರ್ ನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಅನುಷ್ಕಾ ಮೂಲ ಹೆಸರು ಸ್ವೀಟಿ ಶೆಟ್ಟಿ ಎಂದಾಗಿದ್ದು  ಬಾಹುಬಲಿಯಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ರಾಜಕುಮಾರಿಯಾಗಿದ್ದಾರೆ. ಅವರು 140 ಕೋಟಿ ಆಸ್ತಿ ಹೊಂದಿದ್ದಾರೆ. ಜತೆಗೆ ತಮ್ಮ ಸಿನಿಮಾಗೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆದುಕೊಳ್ಳುತ್ತಾರೆ.
SCROLL FOR NEXT