ಹಂಬಲ್ ಪೊಲಿಟಿಶಿಯನ್ ನೋಗರಾಜ್ ಚಿತ್ರ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದ್ದು ಈ ಮಧ್ಯೆ ಹಿಂದಿ ವರ್ಷನ್ ನಲ್ಲೂ ಚಿತ್ರ ಬಿಡುಗಡೆಗೆ ಚಿತ್ರತಂಡ ಯೋಜನೆ ರೂಪಿಸಿದೆ.
ಡಿಸೆಂಬರ್ 15ರಂದು ಅಮೆರಿಕ, ದುಬೈ, ಲಂಡನ್ ಮತ್ತು ಜರ್ಮನಿಯಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇನ್ನು ಬಾಲಿವುಡ್ ನಲ್ಲಿ ಹಿಂದಿ ವರ್ಷನ್ ಚಿತ್ರ ಬಿಡುಗಡೆಯಾಗಿ ಚಿತ್ರತಂಡ ತಯಾರಿ ನಡೆಸಿದ್ದು ಕೆಲ ವಿತರಕರಿಗೆ ಚಿತ್ರವನ್ನು ತೋರಿಸಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮೂಲ ಕನ್ನಡ ಚಿತ್ರ ಬಿಡುಗಡೆ ದಿನಾಂಕದಂದೆ ಹಿಂದಿ ವರ್ಷನ್ ಚಿತ್ರ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರು ಬಯಸಿದ್ದಾರೆ.
ಚಿತ್ರದ ಪ್ರಮಾಣಪತ್ರಕ್ಕಾಗಿ ಚಿತ್ರತಂಡ ಕಾಯುತ್ತಿದ್ದು ಪ್ರಮಾಣಪತ್ರ ಸಿಕ್ಕ ನಂತರ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ. ಸಾದ್ ಖಾನ್ ಎಂಬುವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ದಾನಿಶ್ ಸೇಠ್ ನೋಗರಾಜ್ ಆಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ರೋಜರ್ ನಾರಾಯಣ್, ಶೃತಿ ಹರಿಹರನ್, ವಿಜಯ್ ಚೆಂಡೂರು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ರಕ್ಷಿತ್ ಶೆಟ್ಟಿ ಜತೆಯಾಗಿ ನಿರ್ಮಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos