ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಚಿತ್ರ ರಂಗೀತರಂಗ ಚಿತ್ರದ ಮೂಲಕ ಗಮನ ಸೆಳೆದ ಭಂಡಾರಿ ಬ್ರದರ್ಸ್ ಇದೀಗ ಕನ್ನಡದ ರಾಜರಥ ಚಿತ್ರದಲ್ಲಿ ಒಂದಾಗಿ ಕೆಲಸ ಮಾಡುತ್ತಿರುವುದು ಗೊತ್ತಿರುವ ವಿಚಾರ.
ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ರಾಜರಥ ಚಿತ್ರತಂಡ ಚಿತ್ರವನ್ನು 2018ರ ಜನವರಿ 25ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದೇ ಚಿತ್ರ ತೆಲುಗಿನಲ್ಲಿ ರಾಜರಥಂ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಅನುಪ್ ಭಂಡಾರಿ ಟ್ವೀಟ್ ಮಾಡಿದ್ದು ರಾಜರಥ/ರಾಜರಥಂ ಜಗತ್ತಿನಾದ್ಯಂತ ಜನವರಿ 25ರಂದು ಬಿಡುಗಡೆಯಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ರಂಗೀತರಂಗ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರೂಪ್ ಭಂಡಾರಿ ಇದೀಗ ತೆಲುಗಿಗೆ ಪಾದಾರ್ಪಣೆ ಮಾಡಲಿದ್ದಾರೆ. ತೆಲುಗಿನ ನಿರ್ಮಾಪಕ ಅಜಯ್ ರೆಡ್ಡಿ ಅವರು ಅನೂಪ್ ಭಂಡಾರಿ ಅವರ ಕೆಲಸವನ್ನು ನೋಡಿದ್ದು ಅವರ ನಿರ್ದೇಶನದಲ್ಲಿ ಚಿತ್ರವೊಂದನ್ನು ನಿರ್ಮಿಸಲು ಅಜಯ್ ರೆಡ್ಡಿ ಮುಂದಾಗಿದ್ದಾರೆ. ಇನ್ನು ಎತ್ತರದ ವಿಷಯಕ್ಕೆ ಬಂದರೆ ನಿಪೂರ್ ಭಂಡಾರಿ 6.2 ಅಡಿ ಎತ್ತರವಿದ್ದು ಮಹೇಶ್ ಬಾಬುಗೆ ಸರಿಸಮಾನರಾಗಿದ್ದಾರೆ. ಮೊದಲಿಗೆ ಪ್ರಭಾಸ್ ಜತೆ ಚಿತ್ರ ಮಾಡಲು ಅಜಯ್ ರೆಡ್ಡಿ ಮುಂದಾಗಿದ್ದರು. ಆದರೆ ಅನೂಪ್ ಭಂಡಾರಿ ಅವರ ಎತ್ತರ ಮತ್ತು ನಟನೆಯ ಚಾಕಚಕ್ಯತೆ ಕಂಡು ನಿರೂಪ್ ಜತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿ ರಾಜರಥ ಚಿತ್ರವನ್ನು ಕೆಆರ್ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos