ಸಿನಿಮಾ ಸುದ್ದಿ

ಹಲ್ಲೆ ಆರೋಪ: ಗಾಯಕ ಜುಬೀನ್ ಗಾರ್ಗ್ ಗೆ 3 ತಿಂಗಳ ಜೈಲು ಶಿಕ್ಷೆ

Shilpa D
ಗುವಾಹಟಿ: ಪ್ರಸಿದ್ಧ ಅಸ್ಸಾಮಿ ಹಾಗೂ ಬಾಲಿವುಡ್ ಗಾಯಕ ಜುಬೀನ್ ಗಾರ್ಗ್ ಅವರಿಗೆ ಹಲ್ಲೆ ಪ್ರಕರಣದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ.
ಗ್ಯಾಂಗ್ ಸ್ಟರ್ ಖ್ಯಾತಿಯ ಗಾಯಕನನ್ನು 2013 ರಲ್ಲಿ ಬಂಧಿಸಲಾಗಿತ್ತು. ವಕೀಲರ ಪುತ್ರನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಸಂಬಂಧ ಕಪಾಳ ಮೋಕ್ಷ ಮಾಡಲಾಗಿತ್ತು.
ಐಪಿಸಿ ಸೆಕ್ಷನ್ 323, 342, ಮತ್ತು 506 ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಷನ್ 341 ಅಡಿಯಲ್ಲಿ  ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರು ದಂಡ ವಿಧಿಸಲಾಗಿದೆ.
SCROLL FOR NEXT