ಹಂಬಲ್ ನೊಗ್ರಾಜ್ ಸಿನಿಮಾ ಸ್ಟಿಲ್
ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷ ಉಡುಗೊರೆ ನೀಡಲು ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ತಂಡ ಸಿದ್ಧತೆ ನಡೆಸಿದೆ. ದ್ಯಾನಿಶ್ ಸೇಟ್, ಶೃತಿ ಹರಿಹರನ್ ಮತ್ತು ವಿಜಯ್ ಚೆಂಡೂರ್ ತಂಡ ಚಿತ್ರದ ಪ್ರಮೋಷನಲ್ ಹಾಡನ್ನು ಸಿದ್ದ ಪಡಿಸಿದ್ದು, ನವೆಂಬರ್ 1ರಂದು ಸಮರ್ಪಿಸಲಿದೆ.
ಈ ಹಾಡಿನಲ್ಲಿ 15 ಜನಪ್ರಿಯ ಹಾಡುಗಳಿದ್ದು, ಪ್ರತಿ ಹಾಡನ್ನು 15 ಸೆಕೆಂಡ್ ಅಳವಡಿಸಲಾಗಿದ್ದು ಒಟ್ಟು ಮೂರೂವರೆ ನಿಮಿಷದ ಸಾಂಗ್ ತಯಾರಿಸಲಾಗಿದೆ, ಕನ್ನಡದ ಪ್ರಸಿದ್ದ ನಟರಾದ ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ದನ್, ಶಂಕರ್ ನಾಗ್, ಅನಂತ್ ನಾಗ್ ಮತ್ತು ಅಂಬರೀಷ್ ನಟಿಸಿರುವ ಪ್ರಸಿದ್ದ ಗೀತೆಗಳನ್ನು ಈ ವಿಶೇಷ ಹಾಡಿನಲ್ಲಿ ಸಂಯೋಜಿಸಲಾಗಿದೆ.
ಡ್ಯಾನಿಶ್ ಸೇಠ್, ಶೃತಿ ಹರಿಹರನ್ ಮತ್ತು ವಿಜಯ್ ಹಾಡಿಗಾಗಿ ವಿಶೇಷ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿದ್ದಾರೆ, ರಾಜ್ಯೋತ್ಸವವನ್ನು ಆಚರಿಸಲು ಇದಕ್ಕಿಂತ ಉತ್ತಮವಾದ ಮಾರ್ಗ ಬೇರೊಂದಿಲ್ಲ, ಹಿರಿಯರಿಗೆ ಗೌರವ ಸಲ್ಲಿಸಲು ಇದೊಂದು ಉತ್ತಮ ವಾದದ್ದಾಗಿದೆ ಎಂದು ಡ್ಯಾನಿಶ್ ಹೇಳಿದ್ದಾರೆ.
ಈ ಸಿನಿಮಾದ ಭಾಗವಾಗಿರುವ ನಾನು ನನ್ನ ಹೃದಯಕ್ಕೆ ಹತ್ತಿರವಾಗಿರುವವರಿಗೆ ಏನಾದರೂ ಮಾಡಬೇಕೆಂದು ಬಯಸಿದ್ದೆ, ಅದಕ್ಕಾಗಿ ಹೆಚ್ಚಿನ ಶ್ರಮ ವಹಿಸಿದ್ದೇವೆ. ಪ್ರಮೋಷನಲ್ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ, ಪ್ರೇಕ್ಷಕರಿಗೆ ಖಂಡಿತ ಮೆಚ್ಚುಗೆಯಾಗುತ್ತದೆ ಎಂದು ಹೇಳಿದ್ದಾರೆ.